ನವದೆಹಲಿ : ಅಯೋಧ್ಯೆಯ ರಾಮ ಮಂದಿರ, ಮುಂಬೈನ ಚಬಾದ್ ಹೌಸ್, ದೇಶದ ಕೆಲವು ದೊಡ್ಡ ನಾಯಕರನ್ನ ಗುರಿಯಾಗಿಸಿಕೊಂಡು ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಬಂಧಿತ ಐಸಿಸ್ ಉಗ್ರನಿಂದ ಸ್ಫೋಟಕ ಸಂಚು ಬಹಿರಂಗಗೊAಡಿದೆ.
ಪುಣೆ ಬಳಿಯ ಪಶ್ಚಿಮ ಘಟ್ಟಗಳ ಪರಿಶೀಲನೆ ನಡೆಸಲಾಗಿದ್ದು, ಒಂದು ನಿರ್ದಿಷ್ಟ ದಿನದಂದು ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಆದರೆ ಐಸಿಸ್ ಭಯೋತ್ಪಾದಕ ಶಹನವಾಜ್ನ್ನು ದೆಹಲಿಯಲ್ಲಿ, ರಿಜ್ವಾನ್ನನ್ನ ಲಕ್ನೋನಲ್ಲಿ ಹಾಗೂ ಅರ್ಷದ್ನನ್ನ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಬಂಧಿಸಲಾಗಿದ್ದು, ಶಹನವಾಜ್ ಅಡಗುತಾಣದಿಂದ ಐಇಡಿ ತಯಾರಿಸುವ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಉಗ್ರ ಸಂಚು ವಿಫಲಗೊಳಿಸಲಾಗಿದೆ.