Share this news

ಅಸ್ಸಾಂ: ಭಾನುವಾರ ಅಸ್ಸಾಂನ ನಾಗಾನ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ಸಂಜೆ 4.18ಕ್ಕೆ ಭೂಕಂಪ ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

ಭೂಕಂಪದ ಕೇಂದ್ರ ಬಿಂದು ನಾಗಾನ್ ಜಿಲ್ಲೆಯಲ್ಲಿದ್ದು, ಭೂಕಂಪದ ಆಳ 10 ಕಿ.ಮೀ. ಕೇಂದ್ರ ಅಸ್ಸಾಂನ ಹೊಜೈ ಬಳಿ ಗುವಾಹಟಿಯಿಂದ ಪೂರ್ವಕ್ಕೆ 160 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು.ಬ್ರಹ್ಮಪುತ್ರ ನದಿಯ ಉತ್ತರ ದಡದಲ್ಲಿರುವ ಸೋನಿತ್‌ಪುರದವರಲ್ಲದೆ ನೆರೆಯ ಪಶ್ಚಿಮ ಕರ್ಬಿ ಆಂಗ್ಲಾAಗ್, ಕರ್ಬಿ ಆಂಗ್ಲಾAಗ್, ಗೋಲಾಘಾಟ್ ಮತ್ತು ಮೊರಿಗಾಂವ್ ಜಿಲ್ಲೆಗಳ ಜನರು ಸಹ ಕಂಪನವನ್ನು ಅನುಭವವನ್ನು ಪಡೆದಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.

Leave a Reply

Your email address will not be published. Required fields are marked *