Share this news

ಬೆಂಗಳೂರು: ಆಡಳಿತ ಯಂತ್ರಕ್ಕೆ ವೇಗ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ನಡೆಸಿದೆ. ಮುಂದಿನ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ 51 ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ 11 ಡಿವೈಎಸ್ಪಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರವು ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದು, ಲೋಕಸಭಾ ಚುನಾವಣೆ ನಿಮಿತ್ತ ವರ್ಗಾವಣೆಗೊಳಿಸಲಾಗಿದ್ದ ಆದೇಶವನ್ನು ಭಾಗಶಃ ಮಾರ್ಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅವರ 11 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದಿದೆ.
ಟಿಎA ಶಿವಕುಮಾರ್ ಅವರನ್ನು ಕಲಬುರ್ಗಿಯ ಸಂಚಾರ ಉಪವಿಭಾಗಕ್ಕೆ, ಅಸ್ಲಂ ಪಾಷಾ ಅವರನ್ನು ಸಂಚಾರ ಉಪ ವಿಭಾಗ, ಕಲಬುರ್ಗಿ ನಗರ ಇಲ್ಲಿಗೆ ಮಾಡಲಾದ ಆದೇಶವನ್ನು ರದ್ದುಪಡಿಸಿ, ಸಿಐಡಿಯಲ್ಲೇ ಮುಂದುವರೆಸಲಾಗಿದೆ. ಮೊಹಮ್ಮದ್ ಶರೀಫ್ ರಾವುತರ್ ಎ ಅವರನ್ನು ಕಲಬುರ್ಗಿಯ ಅಳಂದ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಿದ್ದರೇ, ಗೋಪಿ ಬಿಆರ್ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿದೆ.

Leave a Reply

Your email address will not be published. Required fields are marked *