Share this news

ಚಂಡೀಘಡ: ಕರ್ನಾಟಕ,ದೆಹಲಿ, ಪಂಜಾಬ್ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ಹಲವು ಉಚಿತ ಯೋಜನೆಗಳು ಜಾರಿಯಲ್ಲಿದೆ. ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರದ ಉಚಿತ ಯೋಜನೆಗಳನ್ನು ಜಾರಿಗೊಳಿಸಿದಂತೆ ಪಂಜಾಬ್‌ನಲ್ಲೂ ಜಾರಿಗೆ ತಂದಿದೆ.ಆದರೆ ಈ ಯೋಜನೆಗಳಿಂದ ಪಂಜಾಬ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಪಂಜಾಬ್ ಸಾಲದ ಸುಳಿಗೆ ಸಿಲುಕಿದೆ ಎಂದು ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಿರಿಯ ನಾಯಕ ನವಜೋತ್ ಸಿಂಗ್ ಸಿಧು ಆರೋಪಿಸಿದ್ದಾರೆ.
ಕೇವಲ 1 ವರ್ಷ 6 ತಿಂಗಳಲ್ಲಿ ಪಂಜಾಬ್ ಸರ್ಕಾರ ಸಾಲ 50 ಸಾವಿರ ಕೋಟಿ ರೂಪಾಯಿ ಹೆಚ್ಚಾಗಿದೆ. ಕಳೆದೆರಡು ವರ್ಷದಲ್ಲಿ ಪಂಜಾಬ್ ಸರ್ಕಾರದ ಸಾಲದ ಪ್ರಮಾಣ 70 ಸಾವಿರ ಕೋಟಿ ರೂಪಾಯಿಗಳಿಗೆ ಏರಿದೆ ಎಂದ ಸಿಧು,ರಾಜ್ಯಪಾಲರ ಪತ್ರದ ಅಂಕಿಅಂಶಗಳನ್ನು ಉಲ್ಲೇಖಿಸಿ ಆರೋಪಿಸಿದ್ದಾರೆ.

ಭ್ರಷ್ಟಾಚಾರ,ಉಚಿತ ಯೋಜನೆಗಳಿಂದ ಪಂಜಾಬ್ ಸರ್ಕಾರ ಸಾಲ ಹೆಚ್ಚಾಗುತ್ತಲೇ ಇದೆ. ರಾಜ್ಯದ ಜಿಡಿಪಿ ಶೇಕಡಾ 50 ರಷ್ಟಿದೆ. ಆದರೆ ಆರ್ಥಿಕ ಶಿಸ್ತಿನ ಕೊರತೆಯಿಂದ ಪಂಜಾಬ್ ಸಾಲದ ಹೊರೆಯಿಂದ ಬಳಲುತ್ತಿದೆ ಎಂದು ಸಿಧು ಆರೋಪಿಸಿದ್ದಾರೆ.ಪಂಜಾಬ್ ವಿದ್ಯುತ್ ಸರಬರಾಜು ನಿಯಮಿತಕ್ಕೆ 18 ಸಾವಿರ ಕೋಟಿ ರೂಪಾಯಿ ಸಾಲದಲ್ಲಿದೆ. ಮನೆಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಗಾಗಿ 9,641 ಕೋಟಿ ರೂಪಾಯಿ ಸಾಲ ಮಾಡಿದೆ. ಇನ್ನು ಸಬ್ಸಿಡಿ ಹಾಗೂ ಬಿಲ್ 9,020 ಕೋಟಿ ರೂಪಾಯಿ ಹಾಗೂ 2,548 ಕೋಟಿ ರೂಪಾಯಿ ಸಾಲದಲ್ಲಿದೆ. ಇದಕ್ಕೆ ಕಾರಣ ಪಂಜಾಬ್‌ನಲ್ಲಿ ಆಪ್ ಸರ್ಕಾರ ಘೋಷಿಸಿದ ಉಚಿತ ವಿದ್ಯುತ್ ಚಾಲ್ತಿಯಲ್ಲಿದೆ ಎಂದು ಸಿಧು ಆರೋಪಿಸಿದ್ದಾರೆ. ಅಬಕಾರಿ, ಗಣಿಗಾರಿಗೆ ಸೇರಿದಂತೆ ಇತರ ಕೆಲ ಕ್ಷೇತ್ರದ ಮೇಲೆ ಭಾರಿ ತೆರಿಗೆ ವಿಧಿಸಿ ಆದಾಯ ಕ್ರೋಢೀಕರಿಸುವ ಆಪ್ ಪ್ರಯತ್ನ ವಿಫಲವಾಗಿದೆ, ಆಪ್ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪಂಜಾಬ್ ಪರಿಸ್ಥಿತಿ ಕೆಲವೇ ದಿನಗಳಲ್ಲಿ ಬಯಲಾಗಲಿದೆ ಎಂದು ಸಿಧು ಆರೋಪಿಸಿದ್ದಾರೆ.

ಪಂಜಾಬ್ ಸರ್ಕಾರದ ಸಾಲದ ಹೊರೆ ಕುರಿತು ಪಂಜಾಬ್ ರಾಜ್ಯಪಾಲ ಪತ್ರ ಬರೆದಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯಪಾಲರು,ಪಂಜಾಬ್ ಆರ್ಥಿಕ ಶಿಸ್ತಿನ ಕೊರತೆಯನ್ನು ಉಲ್ಲೇಖಿಸಿದ್ದಾರೆ. ಈ ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಸಿಧು ಪುನರುಚ್ಚರಿಸಿದ್ದಾರೆ.

 

 

 

 

 

Leave a Reply

Your email address will not be published. Required fields are marked *