ಬೆಂಗಳೂರು: ರಾಜ್ಯದಲ್ಲಿ ಆರೆಸ್ಸೆಸ್ ನಿಷೇಧ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.ಆರೆಸ್ಸೆಸ್ ನಿಷೇಧಿಸಿದರೆ ಕಾಂಗ್ರೆಸ್ ಸರ್ವನಾಶವಾಗಿ ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಮಾಡಿದ್ದ ಟ್ವಿಟ್ ಗೆ ವ್ಯಾಪಕ ಆಕ್ರೋಶ ಬಿಜೆಪಿಯಿಂದ ವ್ಯಕ್ತವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗೆ ಅಲ್ಲ, ನಾವು ಸಂವಿಧಾನದ ಪವರ್ ತೋರಿಸುತ್ತೇವೆ ಎಂಬುದಾಗಿ ಟ್ವೀಟ್ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಇಂದು ಟ್ವೀಟ್ ಮಾಡಿರುವಂತ ಅವರು, ಬಿಜೆಪಿಗರು ಪದೇಪದೇ ತಾಕತ್ತಿದ್ದರೆ ಆರೆಸ್ಸೆಸ್ ನಿಷೇಧಿಸಿ ಅಂತಿದಾರೆ.ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ,ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಲಿ,ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ಏನೆಂದು ನಾವು ತೋರಿಸುತ್ತೇವೆ ಎಂಬುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ ಖಾತೆಯಲ್ಲಿ ಭಾರತದಲ್ಲಿ ಆರೆಸ್ಸೆಸ್ ಎಂಬ ವಿಚ್ಛಿದ್ರಕಾರಿ ಸಂಘಟನೆ 3 ಬಾರಿ ನಿಷೇಧಕ್ಕೊಳಪಟ್ಟಿತ್ತು. ಸರ್ದಾರ್ ಪಟೇಲರೇ ಭಾರತ ವಿರೋಧಿ ಸಂಘಟನೆ ಎಂಬ ಸರ್ಟಿಫಿಕೇಟ್ ನೀಡಿದ್ದರು. ಕಾಂಗ್ರೆಸ್ ಆಗಲೂ ಇತ್ತು ಈಗಲೂ ಇದೆ, ಮುಂದೆಯೂ ಇರಲಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು ಎಂದು ಟ್ವಿಟ್ ಮಾಡಿ ತಿಳಿಸಲಾಗಿತ್ತು. ಇದಕ್ಕೆ ಬಿಜೆಪಿ ನಾಯಕರು ಸಿಡೆದ್ದು ಆಕ್ರೋಶ ಹೊರ ಹಾಕಿದ್ದರು.