Category: ಮುಂಬಯಿ

ಏ.14ರಂದು `ಜ್ಞಾನಸುಧಾ’ ದ  4 ನೇ ಕ್ಯಾಂಪಸ್ ಅಜೆಕಾರಿನಲ್ಲಿ ಉದ್ಘಾಟನೆ: ಅಮ್ಮನ 100ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಹುಟ್ಟೂರು ಅಜೆಕಾರಿನಲ್ಲಿ ವಿದ್ಯಾ ದೇಗುಲ ನಿರ್ಮಿಸಿದ ಗಣಿತ ಮೇಷ್ಟ್ರು!

ಕಾರ್ಕಳ: `ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎನ್ನುವ ರಾಮಾಯಣದ ಶ್ಲೋಕದಂತೆ ಹೆತ್ತ ತಾಯಿ ಹಾಗೂ ಜನ್ಮಭೂಮಿ ಇವೆರಡು ಸ್ವರ್ಗಕ್ಕಿಂತಲೂ ಶ್ರೇಷ್ಠ ಎನ್ನುವ ಮಾತಿದೆ. ಇದನ್ನು ತನ್ನ ಬದುಕಿನಲ್ಲಿ ಯಥಾವತ್ತಾಗಿ ಅಳವಡಿಸಿಕೊಂಡವರು ಶಿಕ್ಷಣ ಸಂತ ಅಜೆಕಾರಿನ ಡಾ.ಸುಧಾಕರ ಶೆಟ್ಟಿಯವರು. ಸ್ವರ್ಗಸ್ಥರಾಗಿರುವ ತನ್ನ ತಾಯಿ…

ಅಜೆಕಾರು ಕಲಾಭಿಮಾನಿ ಬಳಗಕ್ಕೆ ರಜತ ಸಂಭ್ರಮ ಪ್ರಯುಕ್ತ ಅ.24,25 ರಂದು ಮುಂಬಯಿ ಯಕ್ಷಗಾನ ಸಮ್ಮೇಳನ – 2026: ಮುಂಬಯಿಯಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಶ್ಲಾಘನೀಯ: ರಜತ ಸಂಭ್ರಮ ಪೂರ್ವಭಾವಿ ಸಭೆಯಲ್ಲಿ ಡಾ.ಎಂ ಪ್ರಭಾಕರ ಜೋಶಿ ಅಭಿಮತ

ಕಾರ್ಕಳ,ಮಾ14: ಕರಾವಳಿಯವರು ಉದ್ಯೋಗ ಅರಸಿಕೊಂಡು ಮುಂಬಯಿ ಮಹಾನಗರಕ್ಕೆ ಹೋಗಿ ಅಲ್ಲಿ ಉದ್ಯಮ ಕಟ್ಟಿ ಯಶಸ್ಸು ಸಂಪಾದಿಸಿದ್ದಾರೆ.ನಮ್ಮೂರಿನ ಉದ್ಯಮಿಗಳು ತಮ್ಮ ಉದ್ಯಮದ ಜೊತೆಜೊತೆಗೆ ಕರಾವಳಿಯ ಗಂಡು ಕಲೆಯಾದ ಯಕ್ಷಗಾನವನ್ನು ಹಾಗೂ ಕಲಾವಿದರನ್ನು ನಿರಂತರ ಪೋಷಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ…

ಮಹಾರಾಷ್ಟ್ರ ಡಿಸಿಎಂ, ಎನ್ ಸಿ ಪಿ ನಾಯಕ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮೃತ್ಯು : ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ

ಮುಂಬೈ, ಜ. 28: ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್ ಸಿ ಪಿ ನಾಯಕ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ…

ಇಂದು ಬ್ರಹನ್ಮುಂಬಯಿ ಚುನಾವಣಾ ಫಲಿತಾಂಶ ಪ್ರಕಟ: 150 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆಲುವು ಎಂದ ಸಮೀಕ್ಷೆಗಳು

ಮುಂಬಯಿ, ಜ.16: ಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಮುಂಬಯಿ ಸೇರಿದಂತೆ ರಾಜ್ಯದ 29 ಪುರಸಭೆಗಳಿಗೆ ಜನವರಿ 15ರಂದು ಮತದಾನ ನಡೆದಿತ್ತು. ಮುಂಬೈನಲ್ಲಿ ಶೇ. 55 ರಷ್ಟು ಮತದಾನ ದಾಖಲಾಗಿದೆ. ಈ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ…

ಪೂನಾದಲ್ಲಿ ಎಣ್ಣೆಹೊಳೆಯ ಹೊಟೇಲ್ ಉದ್ಯಮಿಯ ಭೀಕರ ಮರ್ಡರ್: ಹೊಟೇಲ್ ಸಿಬ್ಬಂದಿಯಿಂದಲೇ ಹತ್ಯೆಗೀಡಾದ ಸಂತೋಷ್ ಶೆಟ್ಟಿ

ಪೂನಾ,ಆ.27: ಹೊಟೇಲ್ ಸಿಬ್ಬಂದಿಯೊಬ್ಬ ಮದ್ಯಪಾನ ಮಾಡಿ ಕೆಲಸ ಮಾಡುತ್ತಿದ್ದಕ್ಕೆ ಗದರಿದ ಹೊಟೇಲ್ ಮಾಲೀಕನನ್ನೇ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಹೊಟೇಲ್ ಉದ್ಯಮಿ ಸಂತೋಷ್ ಶೆಟ್ಟಿ(46)…

ಅಜೆಕಾರಿನಲ್ಲಿ ಬಾಲಾಜಿ ಬೇಕರಿ & ಕ್ರೀಂ ಪಾರ್ಲರ್ ಶುಭಾರಂಭ: ದುಡಿಮೆಗೆ ತಕ್ಕ ಪ್ರತಿಫಲ ದೇವರು ಕೊಟ್ಟೇ ಕೊಡುತ್ತಾನೆ: ಮುಂಬಯಿ ಉದ್ಯಮಿ ಶಿವರಾಮ ಶೆಟ್ಟಿ

ಅಜೆಕಾರು,ಆ,16:ನಾವು ಮಾಡುವ ಯಾವುದೇ ಕೆಲಸಕಾರ್ಯಗಳಾಗಲಿ ಅತ್ಯಂತ ಶ್ರದ್ಧೆ, ನಿಷ್ಠೆಯಿಂದ ಮಾಡಬೇಕು. ಭಗವಂತನ ಮೇಲೆ ನಂಬಿಕೆಯಿಟ್ಟು ಮಾಡುವ ದುಡಿಮೆಗೆ ತಕ್ಕ ಪ್ರತಿಫಲ ಖಂಡಿತವಾಗಿ ಸಿಗುತ್ತದೆ ಎಂದು ಮುಂಬಯಿಉದ್ಯಮಿ ಶಿವರಾಮ ಜಿ ಶೆಟ್ಟಿ ಹೇಳಿದರು. ಅವರು ಭಾನುವಾರ ಅಜೆಕಾರಿನ ಅಜೆಕಾರ್ ಕಾಂಪ್ಲೆಕ್ಸ್ ನಲ್ಲಿ ನೂತನ…

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಜಾಗ ಕಬಳಿಸಿದ ವ್ಯಕ್ತಿಯನ್ನೇ ವ್ಯವಸ್ಥಾಪನ ಸಮಿತಿಯ ಸದಸ್ಯನಾಗಿ ಆಯ್ಕೆ ಮಾಡಿದ ಆರೋಪ: ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಮಾಜಿ ಅಧ್ಯಕ್ಷ ಉದ್ಯಮಿ ಶಿವರಾಮ ಶೆಟ್ಟಿ

ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕ ಹಾಗೂ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಹಾಲಿ ವ್ಯವಸ್ಥಾಪನ ಸಮಿತಿಯ ಸದಸ್ಯರು ಹಾಗೂ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಅಜೆಕಾರು ದೇವಸ ಶಿವರಾಮ ಶೆಟ್ಟಿಯವರು ತಮ್ಮ…

ಮುಂಬಯಿ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆಯವರ 50ನೇ ಜನ್ಮ ದಿನಾಚರಣೆ: ದುಡಿಮೆಯ ಒಂದಂಶ ಸಮಾಜಕ್ಕೆ ವಿನಿಯೋಗಿಸಿದರೆ ಭಗವಂತನ ಅನುಗ್ರಹ ಪ್ರಾಪ್ತಿ : ಸುಬ್ರಹ್ಮಣ್ಯ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

ಕಾರ್ಕಳ : ನಮ್ಮ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸಿದಾಗ ಭಗವಂತನ ಕೃಪೆ ಸಿಗುತ್ತದೆ,ಹಾಗಾಗಿ ನಮ್ಮಿಂದಾದ ಸೇವೆಯನ್ನು ಭಗವಂತನ ಹಾಗೂ ಸಮಾಜಕ್ಕೆ ನೀಡಬೇಕು. ಮಹೇಶ್ ಶೆಟ್ಟಿಯವರು ತನಗಾಗಿ ಬದುಕದೇ ಇಡೀ ಹಿಂದೂ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸೇವೆಯನ್ನು ನೀಡುತ್ತಿದ್ದಾರೆ. ಅದರಂತೆ…

ಮುಂಬಯಿ ಹೊಟೇಲ್ ಉದ್ಯಮಿ ಅಜೆಕಾರು ಪಮ್ಮೊಟ್ಟು ಸುಂದರ ಶೆಟ್ಟಿ(76) ಹೃದಯಾಘಾತದಿಂದ ನಿಧನ

ಮುಂಬಯಿ: ಹೊಟೇಲ್ ಉದ್ಯಮಿ, ಪ್ರಗತಿಪರ ಕೃಷಿಕ, ಧಾರ್ಮಿಕ ಮುಖಂಡ ಅಜೆಕಾರಿನ ಪಮ್ಮೊಟ್ಟು ಸುಂದರ ಶೆಟ್ಟಿ(76) ಹೃದಯಾಘಾತದಿಂದ ಮುಂಬಯಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ತನ್ನ ಕುಟುಂಬ ವರ್ಗದವರ ಜತೆ ಮುಂಬಯಿನ ವಜ್ರೇಶ್ವರಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡಾಗ ತಕ್ಷಣವೇ ಅವರನ್ನು ಆಸ್ಪತೆಗೆ…

ಮುಂಬಯಿ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರ ಸಹೋದರ ಕೇಶವ ನಾಯಕ್ ಹೃದಯಾಘಾತದಿಂದ ನಿಧನ

ಮುಂಬಯಿ: ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಮುಂಬಯಿ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರ ಸಹೋದರ ಕೇಶವ ನಾಯಕ್(65) ಅವರು ಮಂಗಳವಾರ ರಾತ್ರಿ ಮುಂಬಯಿನ ಪಶ್ಚಿಮ ಮಲಾಡ್ ನ ಶೈಲೇಂದ್ರ ನಗರದ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಕೇಶವ ನಾಯಕ್ ಕಲಾವಿದರಾಗಿ…