ಕಾರ್ಕಳ : ಶ್ರೀ ಮಹಾದೇವಿ ಭಜನಾ ಮಂಡಳಿ ಹಾಗೂ ಸಾಂಸ್ಕೃತಿಕ ಕ್ರೀಡಾ ಸಂಘ ಮರ್ಣೆ ಹಾಗೂ ಶ್ರೀ ಮಹಾದೇವಿ ಕ್ರಿಕೆಟರ್ಸ್ ನಡಿಬೆಟ್ಟು ಅಜೆಕಾರು ಇವರ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ವಿವಿಧ ಗ್ರಾಮೀಣ ಕ್ರೀಡಾಸ್ಪರ್ಧೆಗಳ ಕ್ರೀಡಾಕೂಟ ಆಗಸ್ಟ್ 20 ಭಾನುವಾರದಂದು ನಡಿಬೆಟ್ಟು ಗದ್ದೆಯಲ್ಲಿ ನಡೆಯಲಿದೆ.
ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ದಂಪತಿಗಳಿಗೆ ಹಾಗೂ ತಾಯಿ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಸಾರ್ವಜನಿಕರು ಈ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ತಿಳಿಸಿದೆ.