ಅಜೆಕಾರು : ಇಂದಿನಿಂದ ಎ.20ರ ವರೆಗೆ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದ್ದು ಆ ಪ್ರಯುಕ್ತ ಇಂದು ದೇವಳದಲ್ಲಿ ಧ್ವಜಾರೋಹಣವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ನಾಳೆ(ಎ.16) ಸಂಜೆ 4.30ರಿಂದ ಅಜೆಕಾರು ಶ್ರೀ ರಾಮಮಂದಿರದಿAದ ವಿವಿಧ ವಾದ್ಯಘೋಷಗಳು ಹಾಗೂ ಭಜನಾ ತಂಡಗಳೊAದಿಗೆ ನೂತನ ರಥ ಸಮರ್ಪಣಾ ಮೆರವೆಣಿಗೆಯು ನೆರವೇರಲಿದೆ. ರಾತ್ರಿ ರಂಗಪೂಜೆ ಹಾಗೂ ಶ್ರೀ ವಿಷ್ಣುಮೂರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಅಜೆಕಾರು ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಎ.17ರಂದು ಮಹಾಚಂಡಿಕಾಯಾಗ, ನೂತನ ರಥಕ್ಕೆ ವಾಸ್ತುಪೂಜೆ, ವಾಸ್ತುಬಲಿ ನಡೆಯಲಿದೆ. ರಾತ್ರಿ 7 ಗಂಟೆಯಿAದ ನೂತನ ರಥ ಸಮರ್ಪಣಾ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಬ್ರಮಣ್ಯ ಮಠದ ಪ್ರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ.ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಎ.18ರಂದು ರಥಾರೋಹಣ, ಅನ್ನಸಂತರ್ಪಣೆ ಸಂಜೆ ರಥೋತ್ಸವ, ಕೆರೆದೀಪ, ಭೂತಬಲಿ ನಡೆಯಲಿದೆ. ಎ.19ರಂದು ಕವಾಟೋದ್ಘಾಟನೆ ಸಂಜೆ ದೈವಗಳ ಭಂಡಾರ ಇಳಿಯುವುದು, ದೈವಗಳ ಕೂಲ, ಅವಭೃತ ಸ್ನಾನ, ಕಟ್ಟೆಪೂಜೆ, ಧ್ವಜಾವರೋಹಣ ಹಾಗೂ ಮಹಾಪೂಜೆ ನಡೆಯಲಿದೆ.ಎ,20ರಂದು ಮಹಾಪೂಜೆ, ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಸಣ್ಣರಂಗಪೂಜೆ, ಮಾರಿ ನಡೆಯಲಿದೆ.