ಕಾರ್ಕಳ: ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವವು ಇಂದಿನಿಂದ ಏಪ್ರಿಲ್ 21ರಿಂದ 26ರವರೆಗೆ ನಡೆಯಲಿದೆ.
ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿ ಇಂತಿದೆ.
ದಿನಾಂಕ 21/04/2023 ಧ್ವಜಾರೋಹಣ, ಸಾಯಂಕಾಲ 5:00 ಧ್ವಜಾರೋಹಣ,ಸುತ್ತುಬಲಿ, ಸಮಾರಾಧನೆ, ಸಾಯಂಕಾಲ 7:00 ರಿಂದ ಹಗಲೋತ್ಸವ,ಚಕ್ರ ಉತ್ಸವ,ಬೆಳ್ಳಿ ಗರುಡವಾಹನ ಉತ್ಸವ.
ದಿನಾಂಕ 22/04/2023,ಸಾಯಂಕಾಲ 4:00,ಸುತ್ತುಬಲಿ, ಸಮಾರಾಧನೆ,,ಸಾಯಂಕಾಲ 7:00ರಿಂದ ಹಗಲೋತ್ಸವ,,ಚಕ್ರ ಉತ್ಸವ,ವೀರ ಮಾರುತಿ ವಾಹನ ಉತ್ಸವ
ದಿನಾಂಕ 23/04/2023,ಸಾಯಂಕಾಲ 4:00,ಸುತ್ತುಬಲಿ, ಸಮಾರಾಧನೆ, ಸಾಯಂಕಾಲ 6.30ರಿಂದ,ಹಗಲೋತ್ಸವ ಕಟ್ಟೆ ಪೂಜೆ,ರಾತ್ರಿ 1.00ರಿಂದ ಚಕ್ರ ಉತ್ಸವ, ಗರುಡ ವಾಹನ ಉತ್ಸವ
ದಿನಾಂಕ 24/4/2023 ಸಣ್ಣ ರಥೋತ್ಸವ, ಸಾಯಂಕಾಲ 4:00 ಸುತ್ತುಬಲಿ, ಸಮಾರಾಧನೆ ರಾತ್ರಿ 8.00 ಮೃಗಬೇಟೆ ಉತ್ಸವ, ಕೆರೆದೀಪ ರಾತ್ರಿ 12.00ರಿಂದ ಚಕ್ರ ಉತ್ಸವ, ಸಣ್ಣ ರಥ ಉತ್ಸವ
ದಿನಾಂಕ 25/04/2023 ಬ್ರಹ್ಮರಥೋತ್ಸವ, ಸಾಯಂಕಾಲ 3.30ರಿಂದ ಯಜ್ಞದ ಪೂರ್ಣಾಹುತಿ, ಸುತ್ತುಬಲಿ ಆರಂಭ, ಚಕ್ರ ಉತ್ಸವ, ಸಾಯಂಕಾಲ 6.00 ರಥಾರೋಹಣ, ಸಮಾರಾಧನೆ ರಾತ್ರಿ 12.00 ರಿಂದ ರಥ ಹೊರಡುವ ಕಾರ್ಯಕ್ರಮ ಆರಂಭ
ದಿನಾಂಕ 26/04/2023 ಸಾಯಂಕಾಲ 3.30ಕ್ಕೆ ದೇವರು ಅವಭೃತ ಉತ್ಸವಕ್ಕೆ ಹೊರಡುವುದು ರಾಮಸಮುದ್ರದಲ್ಲಿ ಅವಭೃತ ಸ್ನಾನ, ರಾತ್ರಿ ಗಂಟೆ 9:30ಕ್ಕೆ ಸಂಪ್ರೋಕ್ಷಣೆ, ಬ್ರಾಹ್ಮಣ ಸಂತರ್ಪಣೆ, ವಸಂತ ಪೂಜೆಯ ಮೂಲಕ ಸಂಪನ್ನಗೊಳ್ಳಲಿದೆ