ಕಾರ್ಕಳ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮಾರ್ಚ್ 26ರ ವರೆಗೆ ವಾರ್ಷಿಕ ಮಹಾರಥೋತ್ಸವವು ಶ್ರೀ ಬಿ.ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ.

ಮಾ.22 ರಂದು ಧ್ವಜಾರೋಹಣ, 23ರಂದು ಕಟ್ಟೆಪೂಜೆ, ಉತ್ಸವ ಬಲಿ, ಮಾರ್ಚ್.24 ರಂದು ರಥೋತ್ಸವ ನೆರವೇರಲಿದೆ. ಮಾ.25 ರಂದು ತುಲಾಭಾರ ಸೇವೆ, ರಾತ್ರಿ ಅವವೃತ ಸ್ನಾನ, ದೈವಗಳ ನೇಮ ಹಾಗೂ ದ್ವಜಾವರೋಹಣ ನಡೆಯಲಿದೆ. ಮಾರ್ಚ್.26 ರಂದು ಮಾಯಂದಲ ನೇಮ ಹಾಗೂ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿದ್ದು ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ.

