ನವದೆಹಲಿ: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದ್ದು ಇಲ್ಲಿ ನಡೆಯಲಿರುವ ಹೆಚ್ಚಿನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ರೈಲ್ವೇ ಮುಂಬೈ ಸೆಂಟ್ರಲ್ ಮತ್ತು ಅಹಮದಾಬಾದ್ ನಡುವೆ ಹೆಚ್ಚುವರಿ ವಂದೇ ಭಾರತ್ ವಿಶೇಷ ರೈಲುಗಳನ್ನು ಓಡಿಸಲು ಸಿದ್ಧವಾಗಿದೆ.
ಉಭಯ ರಾಜ್ಯಗಳ ನಡುವೆ ಒಟ್ಟು 11 ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಕೇಂದ್ರ ರೈಲ್ವೇ ತಿಳಿಸಿದೆ. ರೈಲು ಸಂಖ್ಯೆ 09035 ಮುಂಬೈ ಸೆಂಟ್ರಲ್-ಅಹಮದಾಬಾದ್ ವಂದೇ ಭಾರತ್ ಸೂಪರ್‌ಫಾಸ್ಟ್ ವಿಶೇಷ ರೈಲು ನವೆಂಬರ್ 19, ಭಾನುವಾರ(ಇಂದು) ಬೆಳಿಗ್ಗೆ 5.15 ಕ್ಕೆ ಮುಂಬೈ ಸೆಂಟ್ರಲ್‌ನಿಂದ ಹೊರಟು ಅದೇ ದಿನ ಬೆಳಿಗ್ಗೆ 10.40 ಕ್ಕೆ ಅಹಮದಾಬಾದ್ ತಲುಪಲಿದೆ ಎಂದು ತಿಳಿಸಿದೆ.ಅದೇ ರೀತಿ, ರೈಲು ಸಂಖ್ಯೆ 09036 ಅಹಮದಾಬಾದ್-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ವಿಶೇಷ ರೈಲು ನವೆಂಬರ್ 20 ರಂದು ಸೋಮವಾರ ಬೆಳಿಗ್ಗೆ 2.00 ಗಂಟೆಗೆ ಅಹಮದಾಬಾದ್‌ನಿಂದ ಹೊರಟು ಅದೇ ದಿನ ಬೆಳಿಗ್ಗೆ 07.25 ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ.
ಈ ರೈಲು ಬೋರಿವಲಿ, ಸೂರತ್ ಮತ್ತು ವಡೋದರಾ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ರೈಲು 8 ಕೋಚ್‌ಗಳೊಂದಿಗೆ ಚಲಿಸುತ್ತದೆ ಮತ್ತು ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಕೋಚ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲಾ PRS ಕೌಂಟರ್‌ಗಳು ಮತ್ತು IRCTC ವೆಬ್‌ಸೈಟ್‌ನಲ್ಲಿ ಮೇಲಿನ ರೈಲುಗಳಿಗೆ ಬುಕಿಂಗ್ ಮುಕ್ತವಾಗಿದೆ.