ಕೋಲಾರ: ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆ ಸೇರಿದಂತೆ ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀ ಹೇಳಿದ್ದ ಭವಿಷ್ಯ ನಿಜವಾಗಿದೆ .ಈ ಬೆನ್ನಲ್ಲೇ ಪ್ರಕೃತಿ ವಿಕೋಪ, ನೆರೆಯ ಬಗ್ಗೆ ಇಂದು ಸ್ಪೋಟಕ ಭವಿಷ್ಯವನ್ನು ಅವರು ನೀಡಿದ್ದಾರೆ.
ಇಂದು ಕೋಲಾರದ ಸುಗಟೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ದೊಡ್ಡ ಅವಘಡ ನಡೆಯಲಿದೆ ಎಂದಿದ್ದೆ, ಒಡಿಶಾದಲ್ಲಿ ರೈಲು ಅಪಘಾತ ನಡೆದಿದೆ ಎಂದರು.

ದೇಶಕ್ಕೆ ಗಂಢಾಂತರ ತಪ್ಪಿಲ್ಲ. ಇನ್ನೂ ಒಂದು ಗಂಢಾಂತರ ಕಾದಿದೆ. ಈ ವರ್ಷ ಗುಡುಗು, ಮಿಂಚಿನ ಮೂಲಕ ಅಚಾನಕ್ಕೆ ಪ್ರಕೃತಿಯ ವಿಕೋಪ ಸಂಭವಿಸಲಿದೆ. ಎರಡು, ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆ ಆಗಲಿದ್ದಾವೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಎಲ್ಲೋ ನಡೆದ ಬಾಂಬ್ ದಾಳಿಯಿಂದ ಹಲವೆಡೆ ಅನಾಹುತ ಸಂಭವಿಸಲಿವೆ. ನಮಗೂ ಆ ಅನಾಹುತ ತಟ್ಟಲಿದೆ. ಗಿಡ, ಮರ, ದೈವದ ಆರಾಧ್ಯದ ಸಂಕೇತ ಕೈವಾರ ತಾತಯ್ಯ ಮತ್ತೆ ಹುಟ್ಟಿ ಬರುವ ಸಂಕೇತ ಇದೆ ಎಂದು ಹೇಳಿದರು.



