ಭದೋಹಿ (ಉತ್ತರಪ್ರದೇಶ) : ಉತ್ತರ ಪ್ರದೇಶದ ಭದೋಹಿಯಲ್ಲಿನ 9 ಜನರ ಮುಸ್ಲಿಂ ಕುಟುಂಬವೊಂದು ವಿಂಧ್ಯಾಚಲದಲ್ಲಿ ಪೂಜೆ ಸಲ್ಲಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ.
ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕುಟುಂಬದ ಮುಖ್ಯಸ್ಥರು ರಾಮಮಂದಿರ ದರ್ಶನಕ್ಕಾಗಿ ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕುಟುಂಬವನ್ನು ಬಿಜೆಪಿ ಮುಖಂಡರು ಹೂಮಾಲೆ ಹಾಕಿ, ಕೇಸರಿ ಬಟ್ಟೆ ತೊಡಿಸಿ ಸನ್ಮಾನಿಸಿದ್ದಾರೆ.
ಮುಸ್ಲಿಂ ಮುಖಂಡ ಚೇಡಿ ಮತ್ತು ಅವರ ಕುಟುಂಬ, ಮುಸ್ಲಿಂ ಧರ್ಮದ ಕೆಳ ಸಮುದಾಯದಿಂದ ಬಂದವರಾಗಿದ್ದು ಬ್ಯಾಂಡ್ ನುಡಿಸುವುದರ ಜೊತೆಗೆ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿತ್ತು ಎನ್ನಲಾಗಿದೆ. ಚೇಡಿ ನೇತೃತ್ವದ ಮುಸ್ಲಿಂ ಕುಟುಂಬ ಶುಕ್ರವಾರ ಮಿರ್ಜಾಪುರದ ವಿಂಧ್ಯಾಚಲ ಧಾಮ್‌ಗೆ ತೆರಳಿದರು. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ ಬಳಿಕ ಹಿಂದೂ ಧರ್ಮವನ್ನು ಸ್ವೀಕರಿಸಿದರು.
ಮೊದಲು ತಾನು ಮುಸ್ಲಿಮನಾಗಿದ್ದೆ ಮತ್ತು ಕೆಲವೊಮ್ಮೆ ನಮಾಜ್ ಕೂಡ ಮಾಡುತ್ತಿದೆ. ಆದರೆ ಈಗ ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ ಎಂದು ಚೇಡಿ ಹೇಳಿದದಾರೆ. ಇದಕ್ಕಾಗಿ ಅವರು ವಿಂಧ್ಯಾಚಲ ಧಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಎಲ್ಲಿ ಬೇಕಾದರೂ ಹೋಗುವ ಹಕ್ಕಿದೆ ಎಂದು ಇದೇ ವೇಳೆ ಹೇಳಿದ್ದಾರೆ. ಅಯೋಧ್ಯೆಗೆ ಹೋಗುವ ಕುರಿತಾದ ಪ್ರಶ್ನೆಗೆ, ‘ಹೌದು ಹೋಗುತ್ತೇನೆ, ರಾಮಲಲ್ಲಾನನ್ನು ನೋಡಲು ಹೋಗುತ್ತೇನೆ’ ಎಂದು ತಿಳಿಸಿದ್ದಾರೆ.
ಚೇಡಿಯ ಮಕ್ಕಳು ತಮ್ಮ ತಂದೆ ಎಲ್ಲಿದ್ದರೂ ತಾವೂ ಆ ಧರ್ಮದಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ. ಚೇಡಿ ಅವರ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಮಾಹಿತಿ ತಿಳಿದ ಮುಖಂಡರು ಚೇಡಿಯವರ ಮನೆಗೆ ಆಗಮಿಸಿ ಇಡೀ ಕುಟುಂಬಕ್ಕೆ ಮಾಲಾರ್ಪಣೆ ಮಾಡಿ ಕೇಸರಿ ವಸ್ತ್ರ ತೊಡಿಸಿ ಗೌರವಿಸಿದರು. ಮತ್ತೊಂದೆಡೆ, ವಿಂಧ್ಯಾಚಲದಲ್ಲಿ ಪೂಜೆ ಪುನಸ್ಕಾರದ ಫೋಟೋ ವೈರಲ್ ಅಗಿದ್ದು, ಈ ಫೋಟೋದಲ್ಲಿ ಮಿರ್ಜಾಪುರದ ಬಿಜೆಪಿ ಶಾಸಕ ರತ್ನಾಕರ್ ಮಿಶ್ರಾ ಈ ಕುಟುಂಬಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಚೇಡಿಗೆ ಐದು ಗಂಡು ಮಕ್ಕಳಿದ್ದಾರೆ, ಅವರ ಹೆಸರುಗಳು ಅನ್ವರ್, ಸನ್ವರ್, ಗುಡ್ಡು, ಬಬ್ಲು ಮತ್ತು ಗಬ್ಬರ್. ಅವರಿಗೆ ಐದು ಮೊಮ್ಮಕ್ಕಳು ಕೂಡ ಇದ್ದಾರೆ, ಅವರ ಹೆಸರುಗಳು ಶಂಶಾದ್, ಕಾಶ್, ಆರಿಫ್ ಮತ್ತು ಸಲೀಂ ಎಂಬುವುದಾಗಿದ್ದು,ಇನ್ನು ಮುಂದೆ ಎಲ್ಲರ ಹೆಸರುಗಳನ್ನು ಹಿಂದೂ ಸಂಪ್ರದಾಯಂತೆ ಬದಲಾಯಿಸುವುದಾಗಿ ಚೇಡಿ ಹೇಳಿದ್ದಾರೆ.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ