ಕಾರ್ಕಳ: ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಜಕ್ಕಲ್ ಬೆಟ್ಟದಲ್ಲಿ ಎಸ್ ವಿ ಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಎನ್ ಎಸ್ ಎಸ್ ಶಿಬಿರದ ಪರಿಸರದಲ್ಲಿ ಒಂದು ದಿನ ಕಾರ್ಯಕ್ರಮವು ಭಾನುವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ತೀರ್ಥಹಳ್ಳಿ ಪ್ರಗತಿಪರ ಕೃಷಿಕ ದೀಪಕ್ ಹುಲ್ಕುಳಿ ಮಾತನಾಡಿ, ಪ್ರಕೃತಿಯಲ್ಲಿ ಹುಟ್ಟು ಸಾವು ಸೋಜಿಗದ ಸಂಗತಿಗಳು. ಮನುಜನಿಗೆ ತಕ್ಕಂತೆ ಪ್ರಕೃತಿಯನ್ನು ಬದಲಾಯಿಸುವುದು ತಪ್ಪು .ಅದರೆ ಪರಿಸರಕ್ಕೆ ತಕ್ಕಂತೆ ಬದುಕಲು ಮನುಜ ಕಲಿಯಬೇಕು . ಪ್ರಕೃತಿಯು ವಿಸ್ಮಯದ ಮೂಲವಾಗಿವೆ. ಮನುಜ ಅದನ್ನು ಅರಿತು ಬಾಳಬೇಕು ಎಂದರು.
ಎಸ್ ವಿ ಟಿ ಪದವಿ ಕಾಲೇಜಿನ ಪ್ರಾಂಶುಪಾಲೆ ಉಷಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಕಡ್ತಲ ಗ್ರಾ.ಪಂ ಅಧ್ಯಕ್ಷೆ ಮಾಲತಿ ಕುಲಾಲ್, ಎನ್ನೆಸ್ಸೆಸ್ ಶಿಬಿರಾಧಿಕಾರಿ ಪದ್ಮಜಾ, ಕಡ್ತಲ ಗ್ರಾ.ಪಂ ಉಪಾಧ್ಯಕ್ಷ ಸತೀಶ್ ಪೂಜಾರಿ, ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಎಳ್ಳಾರೆಯ ಸಂಸ್ಥಾಪಕ ದೇವೇಂದ್ರ ಕಾಮತ್ ಉಪಸ್ಥಿತರಿದ್ದರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು