ಕಾರ್ಕಳ: ಹಿರಿಯ ಐಎಎಸ್ ಅಧಿಕಾರಿ ಹಾಗೂ ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಕಾರ್ಕಳ ತಾಲೂಕಿನ ಎಳ್ಳಾರೆಯ ಬಿ.ಸದಾಶಿವ ಪ್ರಭು ಅವರ ಮಾತೃಶ್ರೀಯವರಾದ ಜಲಜಾಕ್ಷಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದ ನವೆಂಬರ್ 29ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಎಳ್ಳಾರೆ ದಿ. ವಿಠಲ ಪ್ರಭು ಅವರ ಧರ್ಮಪತ್ನಿಯಾಗಿರುವ ಜಲಜಾಕ್ಷಮ್ಮ ಅವರು ಹಿರಿಯ ಪುತ್ರ ಆದಾಯ ತೆರಿಗೆ ಇಲಾಖೆಯ ಹಿರಿಯ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ ಪ್ರಭು ಕಿರಿಯ ಪುತ್ರ ಬಿ.ಸದಾಶಿವ ಪ್ರಭು ಎಳ್ಳಾರೆ ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.