ಕಾರ್ಕಳ : ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎ.14ರಿಂದ 20ರ ವರೆಗೆ ನೂತನ ರಥ ಸಮರ್ಪಣಾ ಸಮಾರಂಭ ಹಾಗೂ ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ.
ಎ.14ರಂದು ನಿತ್ಯಬಲಿ, ಅಂಕುರಾರ್ಪಣೆ, ಅಂಕುರ ಬಲಿ,ರಂಗಪೂಜೆ, ಎ.15 ರಂದು ಧ್ವಜಾರೋಹಣ, ರಾತ್ರಿ ರಂಗಪೂಜೆ ಹಾಗೂ ಶ್ರೀ ವಿಷ್ಣುಮೂರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಅಜೆಕಾರು ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಎ.16ರಂದು ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿದಾನ ಸೇವೆ ನಡೆಯಲಿದ್ದು ಸಂಜೆ 4.30ರಿಂದ ಅಜೆಕಾರು ಶ್ರೀ ರಾಮಮಂದಿರದಿAದ ನೂತನ ರಥ ವಿವಿಧ ವಾಧ್ಯಘೋಷಗಳೊಂದಿಗೆ ಪುರಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಗುವುದು. ಎ.17ರಂದು ಮಹಾಚಂಡಿಕಾಯಾಗ, ನೂತನ ರಥಕ್ಕೆ ವಾಸ್ತುಪೂಜೆ, ವಾಸ್ತುಬಲಿ ನಡೆಯಲಿದೆ. ರಾತ್ರಿ 7 ಗಂಟೆಯಿAದ ನೂತನ ರಥ ಸಮರ್ಪಣಾ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಬ್ರಮಣ್ಯ ಮಠದ ಪ್ರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ.ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಎ.18ರಂದು ರಥಾರೋಹಣ, ಅನ್ನಸಂತರ್ಪಣೆ ಸಂಜೆ ರಥೋತ್ಸವ, ಕೆರೆದೀಪ, ಭೂತಬಲಿ ನಡೆಯಲಿದೆ. ಎ.19ರಂದು ಕವಾಟೋದ್ಘಾಟನೆ ಸಂಜೆ ದೈವಗಳ ಭಂಡಾರ ಇಳಿಯುವುದು, ದೈವಗಳ ಕೂಲ, ಅವಭೃತ ಸ್ನಾನ, ಕಟ್ಟೆಪೂಜೆ, ಧ್ವಜಾವರೋಹಣ ಹಾಗೂ ಮಹಾಪೂಜೆ ನಡೆಯಲಿದೆ.ಎ,20ರಂದು ಮಹಾಪೂಜೆ, ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಸಣ್ಣರಂಗಪೂಜೆ, ಮಾರಿ ನಡೆಯಲಿದೆ.