ಕಾರ್ಕಳ ತಾಲೂಕಿನ ಈದು ಗ್ರಾಮದ ನಾಯರಬೆಟ್ಟು ನಿವಾಸಿ ದಿನೇಶ್ ಎಂಬವರ ಪತ್ನಿ ಮಮತಾ(40) ಎಂಬವರು ಮೃತಪಟ್ಟ ಮಹಿಳೆ.
ಅಂಗನವಾಡಿ ಸಹಾಯಕಿಯ ಹುಟ್ಟು ಹಬ್ಬದ ನಿಮಿತ್ತ ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆ ಮಮತಾ ಪ್ರತ್ಯೇಕ ಬೈಕಿನಲ್ಲಿ ಬುಧವಾರ ಕಟೀಲು ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನ ಪಡೆದು ಮಮತಾ ಅವರು ತನ್ನ ಪತಿಯ ಬೈಕಿನಲ್ಲಿ ವಾಪಾಸು ಮನೆಗೆ ಬರುತ್ತಿದ್ದಾಗ ನಿಡ್ಡೋಡಿ ಎಂಬಲ್ಲಿ ಬೈಕಿನಿಂದ ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಈ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
1 2