ಮೂಡಬಿದಿರೆ: ಜೆಸಿಐ ಭಾರ್ಗವ್ ಸಪ್ತಾಹದ ಅಂಗವಾಗಿ ಶ್ರೀ ಸುಭ್ರಮಣ್ಯ ಸ್ವಾಮಿ ಪ್ರೌಢ ಶಾಲೆ ಕಡಂದಲೆ ವಿದ್ಯಾಗಿರಿಯಲ್ಲಿ ರಂಗೋಲಿ ಸ್ಪರ್ಧೆ, ಮದರಂಗಿ ಹಾಕುವ ಸ್ಪರ್ಧೆ, ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪದವಿ ವಿಭಾಗದಲ್ಲಿ ಮತ್ತು ಸಾರ್ವಜನಿಕ ವಿಭಾಗದಲ್ಲಿ ಭಕ್ತಿಗೀತೆ ಸ್ಪರ್ಧೆ ನಡೆಯಿತು.
ಜೆಸಿಐ ಅಧ್ಯಕ್ಷೆ ಮಾಲತಿ ಉಮೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾದ್ಯಾಯರು ಶಂಕರ್ ನಾರಾಯಣ ರಾವ್, ಶಾಲೆಯ ಮುಖ್ಯೋಪಾಧ್ಯಾಯರು ದಿನಕರ ಕುಂಬಾಶಿ, ಜೆಸಿಐ ರಮ್ಯಾ ಅರುಣ್ ರಾವ್, ಜೆಸಿಐ ವಿಜಯಲಕ್ಷ್ಮಿ, ಜೆಸಿಐ ಪ್ರತಿಮಾ ಶೆಟ್ಟಿ,ಗ್ರಾ ಪಂಚಾಯತ್ ಸದಸ್ಯ ಜಗದೀಶ್ ಕೋಟ್ಯಾನ್, ಜೆಸಿಐ ಪ್ರಶಾಂತ್, ಜೆಸಿಐ ಉಮೇಶ್ ನಾಯ್ಕ್, ಪುಷ್ಪರಾಜ್, ಮಾರುತಿ ರಾವ್, ಪ್ರಾಪ್ತಿ ಶೆಟ್ಟಿ ನಿರ್ದೇಶನ ಜೆಸಿಐ ಅಶ್ವಿನಿ, ಜೆಸಿಐ ಅರುಣ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಜೆಸಿಐ ಸುರೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಇಂದು ಸಂಜೆ 6:30ಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನ ಕಡಂದಲೆ ಜೇಸೀ ಸಪ್ತಾಹ 2023 ಸಮಾರಂಭ ನಡೆಯಲಿದೆ.