ಕಾರ್ಕಳ: ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕೋಟಿಬೆಟ್ಟು ಎಂಬಲ್ಲಿನ ಕೇರಳ ಮೂಲದ ಬಿಜು ಎಂಬಾತನ ರಬ್ಬರ್ ತೋಟದಲ್ಲಿ ರಬ್ಬರ್ ಮರದಿಂದ ಬಿದ್ದು ಗಾಯಗೊಂಡಿದ್ದ ತ್ರಿಪುರಾ ರಾಜ್ಯದ ರಾಂಪುರ ಮಥಿನ್ ನಗರ್ ನಿವಾಸಿ ಅವಯ್ ಮಂಜ ದೆಬ್ರಮ್(34) ಎಂಬಾತ ಚಿಕಿತ್ಸೆ ಫಲಿಸದೇ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ.
ಅವಯ್ ಮಂಜ ದೆಬ್ರಮ್ ಹಾಗೂ ಆತನ ಸಂಬAಧಿಕನಾದ ಅಜೋಯ್ ದೆಬ್ರಮ್ ಕಳೆದ 3 ತಿಂಗಳ ಹಿಂದಷ್ಟೇ ಕಲ್ಯಾದ ಬಿಜು ಎಂಬಾತನಲ್ಲಿ ಕೆಲಸಕ್ಕೆ ಸೇರಿದ್ದರು. ಕಳೆದ ಏಪ್ರಿಲ್ 29ರಂದು ಅವಯ್ ದೆಬ್ರಮ್ ರಬ್ಬರ್ ಮರದಿಂದ ಕೆಳಕ್ಕೆಬಿದ್ದು ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಗಾಯಗಳಾದ ಹಿನ್ನಲೆಯಲ್ಲಿ ಒಂದು ತಿಂಗಳಿನಿAದ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜೂನ್ 3ರಂದು ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.