ಬೆಂಗಳೂರು: ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಅವರ ಪತ್ನಿ ನೂತನಾ ಅವರಿಗೆ ಬಿಜೆಪಿ ಸರ್ಕಾರ ಮಾನವೀಯ ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ನೂತನ ಅವರ ನೇಮಕಾತಿಯನ್ನು ರದ್ದುಪಡಿಸಿ ಶಾಕ್ ನೀಡಿದೆ.
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸೆ.22 ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಿತ್ತು. ಈ ಹಿನ್ನೆಲೆ ನೂತನ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಛೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಮಾವನೀಯತೆಯನ್ನೇ ಮರೆತು ನೂತನ ಅವರ ಕೆಲಸ ಕಿತ್ತುಕೊಂಡಿದ್ದು, ಉದ್ಯೋಗ ಕಳೆದುಕೊಂಡ ನೂತನಾ ಕಣ್ಣೀರಿಡುತ್ತಿದ್ದಾರೆ.ನಾವು ರಾಜಕೀಯ ನಾಯಕರನ್ನು ನಂಬಿ ಮೋಸ ಹೋಗಿದ್ದೇವೆ, ನನ್ನ ಜೀವನಾಧಾರಕ್ಕೆ ವ್ಯವಸ್ಥೆ ಕೆಲಸವನ್ನು ಕಿತ್ತುಕೊಂಡು ಬೀದಿಪಾಲು ಮಾಡಿದ್ದಾರೆ ಎಂದು ನೂತನಾ ನೋವು ತೋಡಿಕೊಂಡಿದ್ದಾರೆ
ಸರ್ಕಾರದ ಈ ಕ್ರಮಕ್ಕೆ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮಹಿಳೆ ಎನ್ನುವುದನ್ನು ನೋಡದೇ ಸರ್ಕಾರ ಆಕೆಯ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.