Share this news

ಕಾರ್ಕಳ: ಜನಪ್ರತಿನಿಧಿಯಲ್ಲದ ವ್ಯಕ್ತಿಯೊಬ್ಬರು ಅಧಿಕಾರಗಳ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನವಾಗಿದೆ ಅಲ್ಲದೇ ಈ ಮೂಲಕ ಕಾರ್ಕಳದಲ್ಲಿ ಕಾಂಗ್ರೆಸ್ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಕಾರ್ಕಳ ಬಿಜೆಪಿ ಆರೋಪಿಸಿದೆ.


ಈ ಕುರಿತು ಕಾರ್ಕಳ ಬಿಜೆಪಿ ವಕ್ತಾರ ಹರೀಶ್ ಶೆಣೈ ಮಾಧ್ಯಮ ಹೇಳಿಕೆ ನೀಡಿ, ಕಾರ್ಕಳದ ಗುತ್ತಿಗೆದಾರರೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಹಾಗೂ ಇತರ ವೈದ್ಯರ ಹಾಗೂ ಸಿಬ್ಬಂಧಿಗಳ ಸಭೆ ನಡೆಸಿರುವ ಕುರಿತು ಮಾಧ್ಯಮಗಳಲ್ಲಿ ಸುದ್ಧಿ ಹರಡಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದAದಿನಿAದ ಕಾರ್ಕಳದಲ್ಲಿ ಒಬ್ಬರು ತಾನೇ ಜನಪ್ರತಿನಿಧಿ ಎಂಬAತೆ ನಕಲಿ ಜನಪ್ರತಿನಿಧಿಯಾಗಿ ತನ್ನ ತಂಡದೊAದಿಗೆ ಯಾವುದಾದರೊಂದು ಇಲಾಖೆ ಕಛೇರಿಗೆ ಹೋಗಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವುದು, ಕೇಳದಿದ್ದಲ್ಲಿ ವರ್ಗಾವಣೆ ಮಾಡುತ್ತೇವೆ ಎಂದು ಬೆದರಿಸುವುದು ವಿಪರ್ಯಾಸ. ಒಂದು ವೇಳೆ ಇಂತಹ ಚಾಳಿ ಮುಂದುವರೆದಲ್ಲಿ ಕಾರ್ಕಳ ಭಾರತೀಯ ಜನತಾ ಪಕ್ಷವು ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾದೀತು ಎಂದು ಹರೀಶ್ ಶೆಣೈ ಎಚ್ಚರಿಸಿದ್ದಾರೆ.


ಇಡೀ ಉಡುಪಿ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷವನ್ನು ಎಲ್ಲಾ ಕಡೆ ತಿರಸ್ಕರಿಸಿದ್ದಾರೆ,ಯಾರೋ ಒಬ್ಬ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಸರಕಾರಿ ಕಛೇರಿಯಲ್ಲಿ, ಇಲಾಖೆಯಲ್ಲಿ ಸಭೆ ನಡೆಸಬಹುದಾದರೆ ಕಾರ್ಕಳದ ಒಟ್ಟು 8 ಜನ ಸೋತ ಅಭ್ಯರ್ಥಿಗಳೂ ಇಂತಹ ದುರ್ವರ್ತನೆಯನ್ನು ಅನುಸರಿಸಿದರೆ ಸರಕಾರಿ ಆಡಳಿತ ವ್ಯವಸ್ಥೆಯು ಕುಸಿಯುವ ಸಾಧ್ಯತೆಯಿದೆ. ಆದ್ದರಿಂದ ಅಧಿಕಾರಿಗಳನ್ನು ಬೆದರಿಕೆ ತಂತ್ರವನ್ನು ಮುಂದುವರೆಸಿದರೆ ಕಾರ್ಕಳ ಭಾರತೀಯ ಜನತಾ ಪಾರ್ಟಿಯು ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡಲಿದೆ ಎಂದು ಹರೀಶ್ ಶೆಣೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *