Share this news

ಕಾರ್ಕಳ: ಸಂಘಟನೆಯಿದ್ದರೆ ಸಹಕಾರ, ವಿಫಟನೆಯಾದರೆ ಅಶಾಂತಿ, ಆದ್ದರಿಂದ ಸಮಾಜದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಶಾಂತಿ ಸೌಹಾರ್ದತೆಯಿಂದ ಬಾಳುವುದೇ ಸಹಕಾರದ ಪ್ರಮುಖ ತತ್ವವಾಗಿದೆ ಎಂದು ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಠಾರಕ ಪಟ್ಟಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಕಾರ್ಕಳದ ವಿಕಾಸ ಟವರ್ ವಾಣಿಜ್ಯ ಸಂಕೀರ್ಣದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋಅಪರೇಟಿವ್ ಸೊಸೈಟಿಯ 11ನೇ ಶಾಖೆಯನ್ನು ಉದ್ಘಾಟಿಸಿ ಅಶೀರ್ವಚನ ನೀಡಿದರು.
ಸಹಕಾರ ಕ್ಷೇತ್ರದ ವಹಿವಾಟು ನಡೆಯುವುದು ವಿಶ್ವಾಸಲ್ಲಿ, ಆದ್ದರಿಂದ ಸಮಾಜದ ಚಿಕ್ಕಪುಟ್ಟ ವ್ಯಾಪಾರ ಮಾಡುವವರಿಂದ ಹಿಡಿದು ದೊಡ್ಡ ಉದ್ಯಮಗಳಿಗೂ ಈ ಸಹಕಾರಿ ಸಂಸ್ಥೆ ಶಕ್ತಿಯನ್ನು ತುಂಬುವ ಮೂಲಕ ಬಡಗಬೆಟ್ಟು ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಎಲ್ಲರ ಕಲ್ಪವೃಕ್ಷವಾಗಲಿ ಎಂದು ಶುಭಹಾರೈಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನೂತನ ಬ್ಯಾಂಕಿAಗ್ ವಿಭಾಗವನ್ನು ಉದ್ಘಾಟಿಸಿ ಶುಭ ಹಾರೈಸಿದರು
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮುಖ್ಯ ಅತಿಥಿಯಾಗಿ ಮಾತನಾಡಿ, ಆರ್ಥಿಕತೆಗೆ ದೊಡ್ಡ ಶಕ್ತಿ ನೀಡಿದ ಕ್ಷೇತ್ರವೆಂದು ಅದು ಸಹಕಾರಿ ಕ್ಷೇತ್ರ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ದೇಶಕ್ಕೆ ರಾಷ್ಟಿçÃಕೃತ ಬ್ಯಾಂಕುಗಳನ್ನು ಪರಿಚಯಿಸುವ ಮೂಲಕ ದೇಶದಲ್ಲಿ ಗುರುತಿಸುವಂತಾಗಿದೆ. ಸೇವಾ ಮನೋಭಾವನೆ ಹಾಗೂ ತ್ಯಾಗದ ಮನೋಭಾವನೆಯಿಂದ ಮಾತ್ರ ಸಹಕಾರಿ ಕ್ಷೇತ್ರ ಬೆಳೆಯಲು ಸಾಧ್ಯವಿದೆ. ಉಡುಪಿ ಜಿಲ್ಲೆಯ ಸಹಕಾರಿ ಸಂಸ್ಥೆಗಳು ದೇಶದ ಇತರೇ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿವೆ. ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ತೆರೆದಿದ್ದಾರೆ ಎಂದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಣಿಜ್ಯ ಹಾಗೂ ಖಾಸಗಿ ಬ್ಯಾಂಕುಗಳಿಗೆ ಹೋಲಿಕೆ ಮಾಡುವುದಾದರೆ ಸಹಕಾರಿ ಸಂಸ್ಥೆಗಳು ಸದಸ್ಯರದ್ದು, ಅದರಲ್ಲಿನ ಸದಸ್ಯರೇ ಸಹಕಾರಿ ಸಂಸ್ಥೆಯ ಪಾಲುದಾರರು ಆದ್ದರಿಂದ ಸಹಕಾರಿ ಕ್ಷೇತ್ರ ಸಮಾಜದ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದೆ ಎಂದರು. ರಾಜ್ಯ ಅಥವಾ ಕೇಂದ್ರ ಸರ್ಕಾರದ ಕೆಲವು ಧೋರಣೆಗಳನ್ನು ಸಹಕಾರಿ ಸಂಸ್ಥೆಗೆ ತರುವ ಪ್ರಯತ್ನ ಮಾಡಬಾರದು ಇದರಿಂದ ಸಹಕಾರ ಕ್ಷೇತ್ರದ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು. ಉಡುಪಿ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಕೋ.ರೂ ಠೇವಣಿಯಿದ್ದು, ಇದು ಜನರು ಸಹಕಾರಿ ಕ್ಷೇತ್ರದ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು. ಸಹಕಾರಿ ಕ್ಷೇತ್ರವು ಗ್ರಾಮೀಣ ಜನರ ಕಷ್ಟಗಳಿಗೆ ಸ್ಪಂದಿಸುವ ಕ್ಷೇತ್ರವಾಗಿದೆ. ಬಡಗಬೆಟ್ಟು ಸೊಸೈಟಿಯ 11 ಶಾಖೆಗಳ ಪೈಕಿ ಪ್ರಧಾನ ಕಚೇರಿ ಸೇರಿದಂತೆ 8 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ, ಮಾತ್ರವಲ್ಲದೇ ವಾರ್ಷಿಕ 2 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದು, ಈ ಪೈಕಿ 470 ಕೋ.ರೂ ಠೇವಣಿ ಹಾಗೂ 360 ಕೋ.ರೂ ಹೊರಬಾಕಿ ಸಾಲ ನೀಡುವ ಮೂಲಕ ಉತ್ತಮ ವಹಿವಾಟು ನಡೆಸುತ್ತಿದ್ದು, ಇದು ಸರ್ವ ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ, ಕಾರ್ಕಳ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಕೆ.ಜಯರಾಮ ಪ್ರಭು, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಾಜೇಶ್.ವಿ ಶೇರಿಗಾರ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೇವಾ ಕಾರ್ಯಕ್ರಮದಲ್ಲಿ ಕಾರ್ಕಳ ವಿಜೇತ ವಿಶೇಷ ಶಾಲೆ, ಚೇತನಾ ವಿಶೇಷ ಶಾಲೆ, ಸುರಕ್ಷಾ ಆಶ್ರಮದ ಆಯಿಷಾ ಬಾನು ಹಾಗೂ ಬ್ರಹ್ಮಾವರ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ಗೆ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿ, ಕಾರ್ಕಳ ಶಾಖೆಯ ವ್ಯವಸ್ಥಾಪಕ ಸಚಿನ್ ಕುಮಾರ್ ವಂದಿಸಿದರು. ಶಿಕ್ಷಕ ಸತೀಶ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *