ಕಾರ್ಕಳ: ಶಿಷ್ಯನ ಭ್ರಷ್ಟಾಚಾರ ವನ್ನು ಗುರುವೇ ಹೊರಗೆಡವಿದ್ದಾರೆ. ಸಚಿವ ಸುನಿಲ್ ಕುಮಾರ್ ಅವರ ಭ್ರಷ್ಟಾಚಾರದ ಬಗ್ಗೆ ಪ್ರಮೋದ್ ಮುತಾಲಿಕ್ ಅವರ ಆರೋಪ ಸಮಂಜಸವಾಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಪಂಚಾಯತ್ ಮಟ್ಟದಿಂದ ತಾಲೂಕು ಕಚೇರಿಯವರೆಗೆ ಭ್ರಷ್ಟಾಚಾರವು ವ್ಯಾಪಕವಾಗಿ ಹರಡಿದೆ. ಕಾರ್ಕಳದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ಸಚಿವ ಸುನಿಲ್ ಕುಮಾರ್ ಸಾಧನೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದ್ದಾರೆ.
ಅವರು ಕಾರ್ಕಳ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಡದೇ ಜನಸಾಮಾನ್ಯರ ಯಾವುದೇ ಕೆಲಸ ಆಗುತ್ತಿಲ್ಲ. ಕಾಂಗ್ರೆಸ್‌ನ ವೀರಪ್ಪ ಮೊಯಿಲಿ ಮತ್ತು ಗೋಪಾಲ್ ಭಂಡಾರಿಯವರ ಆಡಳಿತ ಕಂಡಿದ್ದೀರಿ, ಗ್ರಾಮೀಣ ಭಾಗದಲ್ಲಿ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವೈದ್ಯರುಗಳು, ಸರಕಾರಿ ಕಛೇರಿಗಳಲ್ಲಿ ಉತ್ತಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕೊಟ್ಟಿದ್ದರು. ಸಾವಿರಾರು ಜನರಿಗೆ ಭೂ ಒಡೆತನ ಹಕ್ಕು ಕೊಟ್ಟಿದ್ದರು. ನಿವೇಶನ ರಹಿತರಿಗೆ ನಿವೇಶನ ಮತ್ತು ವಸತಿ ಜೊತೆಗೆ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಿದ್ದರು. ಆದರೆ ಈಗ ಶಾಲೆಗಳಲ್ಲಿ ಅಧ್ಯಾಪಕರಿಲ್ಲ, ಅಧ್ಯಾಪಕರಿದ್ದರೆ ಮಕ್ಕಳಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ವೈದ್ಯರಿದ್ದರೆ ತಾಂತ್ರಿಕ ಸೌಲಭ್ಯವಿಲ್ಲ ಎಂದು ಆರೋಪಿಸಿದರು.
ಈಗ 40% ಕಮಿಷನ್‌ನಿಂದ ಹಿಡಿದು 100 ತಾಲೂಕು ಕಛೇರಿಗಳಲ್ಲಿ, ಗ್ರಾಮೀಣ ಭಾಗದ ಕಛೇರಿಗಳಲ್ಲಿ ವಿ.ಎ, ಪಿ.ಡಿ.ಒಗಳಿಲ್ಲ. ಎನ್. ಒ. ಸಿ ,ಲೈಸೆನ್ಸ್ಗಳಿಗೆ ಹಕ್ಕುಪತ್ರಕ್ಕೆ ಲಂಚದ ದರ ಪಟ್ಟಿ ಮಾಡಿ ಕುಳಿತಿದ್ದಾರೆ. ವಿವಿಧ ಇಲಾಖೆಯ ಅಧಿಕಾರಿಗಳು ಸಚಿವರ ಆಜ್ಞೆಯಂತೆ ಕೆಲಸ ಮಾಡುತ್ತಾರೆ. ಇವರಿಂದ ಯಾವುದೇ ಸುಧಾರಣೆ ಸಾಧ್ಯವಿಲ್ಲ, ಕಮಿಷನ್ ಕೊಟ್ಟರೆ ಎಲ್ಲವೂ ಆಗುತ್ತದೆ. ಇಲ್ಲದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ. ಸಚಿವರ ಕಾರ್ಯಕ್ರಮಗಳಿಗೆ ಉದ್ಯಮಿಗಳು, ವ್ಯಾಪಾರಿಗಳು ದೇಣಿಗೆ ಸಂದಾಯ ಮಾಡಬೇಕು, ಇಲ್ಲದಿದ್ದರೆ ಇವರ ವ್ಯಾಪಾರ ಬಂದ್ ಮಾಡಲಾಗುತ್ತದೆ.
ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಸಚಿವರ ಆಪ್ತರೆಂದು ಗುರುತಿಸಿಕೊಂಡವರು ಎಲ್ಲ ಕಾನೂನು ನೀತಿ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆ, ಕಲ್ಲುಕೋರೆ ಪರವಾನಿಗೆ ಇಲ್ಲದ ಹೊÊಗೆ ದಂಧೆ, ಲೈಸೆನ್ಸ್ ಇಲ್ಲದೆ ಜುಗಾರಿ ಅಡ್ಡೆಗಳನ್ನು ನಡೆಸುತ್ತಾರೆ. ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಸಚಿವರ ಆಪ್ತರು ನಡೆಸುತ್ತಿರುವ ಎಲ್ಲಾ ಹಗರಣಗಳು ಮತ್ತು ಪೋಲಿಸ್ ಇಲಾಖೆ, ಕಂದಾಯ ಇಲಾಖೆಯಲ್ಲಿ ಮನ ಬಂದAತೆ ಸಚಿವರ ಎಜೆಂಟರುಗಳು ನಡೆಸುತ್ತಿರುವ ಅವ್ಯವವಹಾರಗಳ ಬಗ್ಗೆ ತಮಗೆ ಈಗಾಗಲೇ ಮಾಹಿತಿ ಇದೆ. ಎಲ್ಲ ಇಲಾಖೆಗಳಲ್ಲಿ ಕಾಂಟ್ರಾö್ಯಕ್ಟ್ ವ್ಯವಸ್ಥೆ ಇದೆ. ಬೆಳಕು ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಕೃಷಿ, ವಿದ್ಯುತ್ ತಾಂತ್ರಿಕ ಸಲಕರಣೆಗಳ ಇಲಾಖೆಗಳಲ್ಲಿ ಭ್ರಷ್ಟಾಚಾರ, ನೇಮಕಾತಿಯಲ್ಲಿ ಲಂಚ ಇಂತಹ ಭ್ರಷ್ಟ ಸಚಿವರು ಕಾರ್ಕಳದ ಸಂಸ್ಕೃತಿಗೆ ಅರ್ಹರಲ್ಲ ಎಂದು ಮಂಜುನಾಥ ಪೂಜಾರಿ ಹೇಳಿದರು.
ಉಡುಪಿಯಲ್ಲಿ ನಡೆಯುತ್ತಿರುವ ರಾಜ್ಯ ಯಕ್ಷಗಾನ ಸಮ್ಮೇಳನವನ್ನು ಪ್ರಶಂಸಿಸಿದ ಮಂಜುನಾಥ್ ಪೂಜಾರಿ, ಅಂಬೇಡ್ಕರ್ ಕುವೆಂಪು ಅವರನ್ನು ತಿರುಚಿ ಬರೆದ ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸುತ್ತಿರುವುದನ್ನು ಕಾರ್ಕಳ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸದಾಶಿವ ದೇವಾಡಿಗ, ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್, ಪ್ರಭಾಕರ್ ಬಂಗೇರ ,ಬಾನು ಭಾಸ್ಕರ್ ,ಜಾಯ್ ಟೆಲ್ಲಿಸ್ ಮೊದಲಾದವರು ಉಪಸ್ಥಿತರಿದ್ದರು