ಕಾರ್ಕಳ:ಇAದಿನ ಆಧುನಿಕ ಯುಗದಲ್ಲಿ ಬಹುತೇಕ ಎಲ್ಲಾ ವ್ಯವಹಾರಗಳು ಆನ್‌ಲೈನ್ ನಲ್ಲೇ ನಡೆಯುತ್ತಿರುವುದು ಸರ್ವೇಸಾಮಾನ್ಯ. ಆದರೆ ಕೆಲವು ಖದೀಮರು ಆನ್‌ಲೈನ್ ನಲ್ಲಿ ಪ್ರತಿಷ್ಠಿತ ಕಂಪೆನಿಗಳ ಹೆಸರನ್ನು ಬಳಸಿಕೊಂಡು ನಕಲಿ ಖಾತೆ ತೆರೆದು ಆನ್‌ಲೈನ್ ವ್ಯವಹಾರದ ಮೂಲಕ ಅತ್ಯಂತ ನೈಸಾಗಿ ಜನರನ್ನು ಯಾಮಾರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೂ ವಿಪರ್ಯಾಸವೆಂದರೆ ವಿದ್ಯಾವಂತರೇ ಇಂತಹ ವಂಚನೆಯ ಜಾಲಕ್ಕೆ ಸಿಲುಕಿ ಮೋಸ ಹೋಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾರ್ಕಳದ ಜೋಡುರಸ್ತೆ ಎಂಬಲ್ಲಿನ ಸೌಮ್ಯ ಹಾರ್ಡ್ವೇರ್ ಮಾಲಕರು ನಕಲಿ ಸಿಮೆಂಟ್ ಕಂಪೆನಿಯಿAದ ಮೋಸಹೋಗಿ ಬರೋಬ್ಬರಿ 1.25 ಲಕ್ಷ ರೂ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಸೌಮ್ಯ ಹಾರ್ಡ್ವೇರ್ ಮಾಲಕ ಶರತ್ ಆಚಾರ್ಯ ಎಂಬವರು ಎಸಿಸಿ ಸಿಮೆಂಟ್ ಡೀಲರ್‌ಶಿಪ್ ಪಡೆಯಲು ಆನ್‌ಲೈನ್‌ನಲ್ಲಿ ಹುಡುಕುತ್ತಿದ್ದ ಸಂದರ್ಭದಲ್ಲಿ ವೆಬ್‌ಸೈಟಿನಲ್ಲಿ ಸಿಕ್ಕ ನಂಬರಿಗೆ ಕರೆ ಮಾಡಿ ಡೀಲರ್‌ಶಿಪ್ ಬಗ್ಗೆ ಮಾತುಕತೆ ನಡೆಸಿದ್ದರು,
ಇದರಂತೆ ಅಪರಿಚಿತ ವಂಚಕ ಡೀಲರ್‌ಶಿಪ್ ನೋಂದಣಿ ಶುಲ್ಕ ರೂಪಾಯಿ 1.25 ಲಕ್ಷವನ್ನು ಬ್ಯಾಂಕ್ ಖಾತೆಗೆ ಪಾವತಿಸುವಂತೆ ಸೂಚಿಸಿದ್ದ, ಈತನ ಮಾತು ನಂಬಿದ್ದ ಹಾರ್ಡ್ವೇರ್ ಮಾಲಕ ಸೆಪ್ಟೆಂಬರ್ 5ರಂದು 1.25 ಲಕ್ಷ ಹಣವನ್ನು ಅಪರಿಚಿತ ವ್ಯಕ್ತಿಯ ಮುಂಬಯಿನ ಅಂಧೇರಿಯಲ್ಲಿನ ಐಓಬಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ಬಳಿಕ 1 ಸಾವಿರ ಚೀಲ ಸಿಮೆಂಟ್ ಆರ್ಡರ್ ಮಾಡಲು 3.36 ಲಕ್ಷ ಹಣ ಪಾವತಿಸಲು ಪ್ರಯತ್ನಿಸಿದಾಗ ತಾಂತ್ರಿಕ ತೊಂದರೆಯಿAದ ಹಣ ಪಾವತಿಯಾಗಿಲ್ಲ. ಇದಾದ ಬಳಿಕ ಈ ವ್ಯಕ್ತಿ ಮೊಬೈಲ್ ನಂಬರ್ ಸ್ವಿಚ್ಡ್ ಆಫ್ ಮಾಡಿದ್ದ. ಕೊನೆಗೆ ಎಚ್ಚೆತ್ತ ಹಾರ್ಡ್ವೇರ್ ಮಾಲಕ ಕಾರ್ಕಳ ನಗರ ಠಾಣೆಯಲ್ಲಿ ವಂಚನೆ ದೂರು ನೀಡಿದ್ದಾರೆ.