Share this news

ಕಾರ್ಕಳ: ವಿದ್ಯಾವಂತ ಯುವಕರು ರಾಜಕೀಯ ಕ್ಕೆ ಬರಬೇಕು, ಅಭಿವೃದ್ಧಿತ್ತ ಕಾರ್ಕಳ ಕ್ಷೇತ್ರ ಸಾಗಬೇಕು ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಅಜೆಕಾರು ಪೇಟೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರವು ಸುಭೀಕ್ಷೆಯಾಗಬೇಕು‌, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಅವೆಲ್ಲವೂ ನನ್ನ ಕನಸಾಗಿದೆ ಎಂದರು. ಈ ಬಾರಿಯ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲಿದೆ.ಆದ್ದರಿಂದ ಜನರ ಸೇವೆ ಮಾಡಲು ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಸುರೇಂದ್ರ ಶೆಟ್ಟಿ, ಉಮ್ಮರ್ ಸಾಹೇಬ್, ಬಿಪಿನ್ ಚಂದ್ರಪಾಲ್, ಬೊಗ್ಗುಶೆಟ್ಟಿ, ಡಿ ಆರ್ ರಾಜು , ಗಿರೀಶ್ ಶೆಟ್ಟಿ ಕುಡುಪುಲಾಜೆ, ಸುರೇಂದ್ರ ಶೆಟ್ಟಿ , ಸಂಜೀವ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *