Share this news

ಕಾರ್ಕಳ: ಮಹಾಲಿಂಗೇಶ್ವರ ಯುವಕ ಮಂಡಲ ಮತ್ತು ಮಹಾಲಿಂಗೇಶ್ವರ ಮಹಿಳಾ ಮಂಡಲ ಪತ್ತೊಂಜಿಕಟ್ಟೆ ಪೆರ್ವಾಜೆ  ಕಾರ್ಕಳ  ಇದರ ವತಿಯಿಂದ ಸಂಘದ ನಿಕಟ ಪೂರ್ವ ಅಧ್ಯಕ್ಷ ಪ್ರಸಾದ್ ದೇವಾಡಿಗ, ಗುಂಡ್ಯ ಇವರು ಕೊಡುಗೆಯಾಗಿ ನೀಡಿದ ನೋಟ್ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.

ಪತ್ತೊಂಜಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊರಳಕೋಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಸುಹಾಸಿನಿ ಶೆಟ್ಟಿ. ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ಡಿ’ಅಲ್ಮೇಡಾ, ಪ್ರಸಾದ್ ದೇವಾಡಿಗ, ಯುವಕ ಮಂಡಳದ ಗೌರವ ಸಲಹೆಗಾರರಾದ ಗಣೇಶ್ ಎಂ. ಶೆಟ್ಟಿ, ಹೆನ್ರಿ ಸಾಂತ್ ಮಯೋರ್, ಯುವಕ ಮಂಡಲದ ಕಾರ್ಯದರ್ಶಿ  ಸಂದೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಸನ್ನ ರಾವ್, ಜತೆ ಕಾರ್ಯದರ್ಶಿ  ರವೀಂದ್ರ ಸಫಲಿಗ, ರಾಜೇಂದ್ರ ಸಫಲಿಗ, ಮಹಿಳಾ ಮಂಡಲದ ಕಾರ್ಯದರ್ಶಿ  ಆರುಂಧತಿ ಬಿ. ಆಚಾರ್, ಕ್ರೀಡಾ ಕಾರ್ಯದರ್ಶಿ  ರೂಪ ಹರೀಶ್ ಶೆಟ್ಟಿ, ಮಾಜಿ ಅಧ್ಯಕ್ಷೆ ಅಮ್ರತಾ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *