ಕಾರ್ಕಳ: ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗುಮುರಿಯುವವರೇ ಹೆಚ್ಚು, ಸಿಬ್ಬಂದಿ ಕೊರತೆ, ವೈದ್ಯಕೀಯ ಉಪಕರಣಗಳ ಕೊರತೆ ಹೀಗೆ ಹಲವಾರು ಸಮಸ್ಯೆಗಳಿಂದ ಜನರು ಬೇಸತ್ತು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಆದರೆ ಕಳೆದ ಮೂರು ವರ್ಷಗಳ ಹಿಂದೆ ಹೊಸ ಕಟ್ಟಡ ಹಾಗೂ ಆಧುನಿಕ ಸಲಕರಣೆಗಳಿಂದ ಉದ್ಘಾಟನೆಗೊಂಡ ಕಾರ್ಕಳ ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತಿದೆ. ಬಡರೋಗಿಗಳ ಪಾಲಿಗೆ ಆಶಾಕಿರಣವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ಸಿಬ್ಬಂದಿ ಕೊರತೆಯಿಂದ ಬಡವರ ಜೀವಕ್ಕೆ ಗ್ಯಾರಂಟಿ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ವಾರದ ಹಿಂದೆ ಗರ್ಭಿಣಿಯೊಬ್ಬರ ಮಗು ಹೆರಿಗೆ ಮುನ್ನವೇ ಮೃತಪಟ್ಟ ಪ್ರಕರಣದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷö್ಯದ ಗಂಭೀರ ಆರೋಪ ಕೇಳಿಬಂದಿತ್ತು. ಗರ್ಭಿಣಿ ಪೋಷಕರು ಸಿಟ್ಟಿಗೆದ್ದು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ಗರ್ಭಿಣಿಯೊಬ್ಬರು ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಸಿಬ್ಬಂದಿಗಳ ನಿರ್ಲಕ್ಷö್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಶಸ್ತçಚಿಕಿತ್ಸೆ ಮಾಡಿಸಿಕೊಂಡ ಘಟನೆ ನಡೆದಿದೆ.
ಜಾರ್ಕಳ ಮುಂಡ್ಲಿಯ ನಿವಾಸಿ ಕಿಶೋರ್ ಸುವರ್ಣ ಎಂಬವರ ಪತ್ನಿ ದಿವ್ಯಾ ಭಾನುವಾರ ಹೆರಿಗೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.ಮಗು ತಾಯಿಯ ಹೊಟ್ಟೆಯೊಳಗೆ ಮಲವಿಸರ್ಜನೆ ಮಾಡಿರುವ ಪರಿಣಾಮ ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾಗಿ ಗರ್ಭಿಣಿ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆಯಿದ್ದ ಹಿನ್ನಲೆಯಲ್ಲಿ ತುರ್ತಾಗಿ ಹೆರಿಗೆ ಮಾಡಿಸಬೇಕಿತ್ತು,ಆದರೆ ಪ್ರಸೂತಿತಜ್ಞರು ರಜೆಯಿದ್ದ ಕಾರಣ ನೀಡಿ ಆಸ್ಪತ್ರೆಯ ಸಿಬ್ಬಂದಿಗಳು ಹೆರಿಗೆ ಮಾಡಿಸಲು ಸಾಧ್ಯವಿಲ್ಲವೆಂದು ಹೇಳಿ ನೋವು ಶಮನಕ್ಕೆ ಔಷಧಿ ನೀಡಿ ಪತ್ನಿಯ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಕಿಶೋರ್ ಆರೋಪಿಸಿದ್ದಾರೆ. ಬಳಿಕ ರಾತ್ರಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆ ನಡೆಸಿದ್ದರಿಂದ ನನ್ನ ಪತ್ನಿ ಹಾಗೂ ಮಗುವಿನ ಜೀವ ಉಳಿದಿದೆ ಎಂದು ಕಿಶೋರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕಾರ್ಕಳದ ಕೆದಿಂಜೆ ಕುಂಟಲಗುAಡಿ ಎಂಬಲ್ಲಿನ ಗರ್ಭಿಣಿ ಮಹಿಳೆ ಪ್ರಜ್ಞಾ ಎಂಬವರಿಗೆ ಪ್ರಸವವೇದನೆ ಕಾಣಿಸಿಕೊಂಡಾಗ ಭಾನುವಾರ ರಾತ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಪ್ರಸೂತಿ ವೈದ್ಯರಿಲ್ಲ ಎನ್ನುವ ಕಾರಣ ನೀಡಿ ಹೆರಿಗೆ ಮಾಡಿಸಲು ಹಿಂದೇಟು ಹಾಕಿದ್ದಾರೆ, ಇತ್ತ ಆಂಬುಲೆನ್ಸ್ ಒದಗಿಸುವಂತೆ ಕೋರಿದ್ದರೂ ಆಂಬುಲೆನ್ಸ್ ನೀಡಲು ನಿರಾಕರಿಸಿದಾಗ ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಶೆಟ್ಟಿ, ಶುಭದ್ ರಾವ್,ಅವಿನಾಶ್ ಶೆಟ್ಟಿ ಮಾನವೀಯ ನೆರವಿನಿಂದ ಖಾಸಗಿ ವಾಹನದಲ್ಲಿ ಕಾರ್ಕಳದ ಮಣಿಪಾಲ ರೋಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇತ್ತ ಗರ್ಭಿಣಿ ಪ್ರಜ್ಞಾ ಸಂಬAಧಿಕರು ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದ ಬೆನ್ನಲ್ಲೇ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಆಸ್ಪತ್ರೆಗೆ ಧಾವಿಸಿ ಆಡಳಿತ ವೈದ್ಯಾಧಿಕಾರಿ ಡಾ.ಕೆ ಎಸ್ ರಾವ್ ಅವರನ್ನು ತೀವೃ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇಷ್ಟೆಲ್ಲಾ ಘಟನೆ ನಡೆದು ಸಾರ್ವಜನಿಕರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೂ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ತಪ್ಪನ್ನು ಮುಚ್ಚಿ ಸಮರ್ಥನೆಗೆ ಮುಂದಾಗಿದ್ದಾರೆ.
ಆಸ್ಪತ್ರೆಯಲ್ಲಿ ಪ್ರಸೂತಿತಜ್ಞರ ಕೊರತೆಯಿಂದ ಸ್ವಲ್ಪಮಟ್ಟಿನ ತೊಂದರೆಯಾಗಿದೆ: ಡಿ,ಎಚ್.ಓ ಡಾ.ನಾಗಭೂಷಣ ಉಡುಪ
ಸರ್ಕಾರಿ ಆಸ್ಪತ್ರೆಯಲ್ಲಿ ಗೈನಕಾಲಜಿಸ್ಟ್ ಕೊರತೆಯಿದೆ ಇದರಿಂದ ಹೆರಿಗೆ ವಿಭಾಗದಲ್ಲಿ ತೊಂದರೆಯಾಗುತ್ತಿದೆ, ಸರ್ಕಾರ ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಮುಂದಾದರೂ ಅಭ್ಯರ್ಥಿಗಳು ಬರುತ್ತಿಲ್ಲ, ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಯ ಜತೆಗೆ ಮಾತುಕತೆ ನಡೆಸಿ ಪ್ರಸೂತಿತಜ್ಞರನ್ನು ನೇಮಿಸಲಾಗುವುದು ಎಂದು ಡಿಎಚ್‌ಓ ಡಾ.ನಾಗಭೂಷಣ್ ಉಡುಪ ಭರವಸೆ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವಂತಾಗಬೇಕು: ಶುಭದ್ ರಾವ್
ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಮಾನವೀಯತೆ ಮರೆತು ಬಡವರ ಜೀವದ ಜತೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ, ಬಡವರ ಚಿಕಿತ್ಸೆಗಾಗಿ ಸರ್ಕಾರ ಕೋಟ್ಯಾಂತರ ರೂ ವೆಚ್ಚದಲ್ಲಿ ಆಸ್ಪತ್ರೆಗೆ ನಿರ್ಮುಸಿದ್ದು ಬಡರೋಗಿಗಳಿಗೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುವಂತಾಗಬೇಕು ಎಂದು ಪುರಸಭಾ ಸದಸ್ಯ ಶುಭದ ರಾವ್ ಆಗ್ರಹಿಸಿದ್ದಾರೆ.
ಆಸ್ಪತ್ರೆಯಲ್ಲಿ ಸರಿಯಾದ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ, ಹೆರಿಗೆ ವಿಭಾಗದಲ್ಲಿ ವೈದ್ಯರಿಲ್ಲದೇ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಅವ್ಯವಸ್ಥೆ ಸರಿಪಡಿಸಿ ಬಡರೋಗಿಗಳ ಜೀವ ಉಳಿಸಿ ಎಂದು ಚಿಕಿತ್ಸೆಗೆ ಬಂದ ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ
ಒಟ್ಟಿನಲ್ಲಿ ಬಡರೋಗಿಗಳ ಪಾಲಿಗೆ ಸಂಜೀವಿನಿಯಾಬೇಕಿದ್ದ ಆಸ್ಪತ್ರೆಗೆ ಬೇಕಾದ ಸಿಬ್ಬಂದಿಗಳ ನೇಮಕಾತಿಯಾಗಬೇಕಿದೆ ಜತೆಗೆ ರೋಗಿಗಳ ಜತೆ ದುರ್ವರ್ತನೆ ತೋರುವ ಸಿಬ್ಬಂದಿಗಳಿಗೆ ಬಿಸಿಮುಟ್ಟಿಸುವ ಕೆಲಸವಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ