ಕಾರ್ಕಳ : ಜಾಗತಿಕ ವಿದ್ಯಾಮಾನಗಳು ಅಸಾಮಾನ್ಯ, ಅಸಹಜತೆ ಮತ್ತು ಸಾಕಷ್ಟು ಅನಿಶ್ಚಿತತೆಗಳಿಂದ ಕೂಡಿರುತ್ತದೆ. ಉದ್ದಿಮೆಶಾಹಿತ್ವ ಇಂದಿನ ಅನಿವಾರ್ಯತೆಯಾಗಿದೆ. ಸ್ವಾಭಾವಿಕ ಮತ್ತು ತರಬೇತಿಯ ಮೂಲಕ ಉದ್ದಿಮೆಶಾಹಿಗಳನ್ನು ಸಜ್ಜುಗೊಳಿಸಬಹುದು. ದ.ಕ ಹಾಗೂ ಉಡುಪಿ ಜಿಲ್ಲೆಯ ಜನತೆಯ ಡಿ.ಎನ್.ಎ ಯಲ್ಲಿ ಉದ್ದಿಮೆಶಾಹಿತ್ವಯಿದೆ ಇಕೋ ವ್ಯವಸ್ಥೆ ಬದಲಾಗುತ್ತಿದೆ. ಭಾರತ ಸ್ಟಾರ್ಟ್ ಅಪ್ ಹಬ್‌ಆಗಿ ರೂಪುಗೊಳ್ಳುತ್ತದೆ ಎಂದು ನಿಟ್ಟೆ ಪರಿಗಣಿತ ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ| ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಅವರು ಎಐಸಿ ನಿಟ್ಟೆ ಮತ್ತು ನಿಟ್ಟೆ ವಿ.ವಿಯ ಐಐಸಿ ವತಿಯಿಂದ ಎಮ್.ಬಿ.ಎ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆದ ನಿಟ್ಟೆ ಉದ್ದಿಮೆಶಾಹಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಚಿಪ್ಳೂಣ್‌ಕರ್ ಮಾತನಾಡಿ ರಿಸ್ಕ್ಗಳನ್ನು ತೆಗೆದುಕೊಂಡು ಯೋಜನೆ, ಯೋಚನೆಗಳ ಮೂಲಕ ಉದ್ದಿಮೆಶಾಹಿತ್ವವನ್ನು ಸಾಕಾರಗೊಳಿಸಬೇಕು ಎಂದರು.
ಸಮಾರAಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ, ಉದ್ಯಮಾಡಳಿತ ಸಂಸ್ಥೆಯ ನೂತನ ನಿರ್ದೇಶಕ ಡಾ| ಗುರುರಾಜ್ ಕಿದಿಯೂರು ಮಾತನಾಡಿ ಉದ್ದಿಮೆಶಾಹಿತ್ವ ಇಂದಿನ ಅನಿವಾರ್ಯತೆ ಈ ದೇಶ ಉದ್ದಿಮೆಶಾಹಿತ್ವ ಯಶಸ್ಸಿಗೆ ಸೂಕ್ತ ಎಂದರು.
ಎA.ಬಿ.ಎ ವಿದ್ಯಾರ್ಥಿ ಆದಿತ್ಯ ರಮಣ ಪ್ರಾರ್ಥಿಸಿ, ಎಐಸಿ ನಿಟ್ಟೆ ಮತ್ತು ಕಾರ್ಯಗಾರದ ಸಂಚಾಲಕ ಡಾ.ಎ.ಪಿ ಆಚಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಐಐಸಿ ಅಧ್ಯಕ್ಷ ಡಾ| ಶ್ರೀನಿಕೇತನ್ ವಂದಿಸಿದರು. ಸಮಾರಂಭದ ಬಳಿಕ ಮೂರು ಪ್ರಮುಖ ಗೋಷ್ಠಿಗಳು ನಡೆಯಿತು