ಕಾರ್ಕಳ : ಜೇಸಿಐ ಕಾರ್ಕಳ ರೂರಲ್ ಹಾಗೂ ಪೋಲಿಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ (ಬೋರ್ಡ್ ಹೈಸ್ಕೂಲ್) ಕಾರ್ಕಳ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಕಾರ್ಕಳ ಬೋರ್ಡ್ ಹೈಸ್ಕೂಲ್ ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳ ನಗರ ಪೋಲಿಸ್ ಠಾಣೆ ಯ ಹೆಡ್ ಕಾನ್ ಸ್ಟೇಬಲ್ ಸಂತೋಷ ಕೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚು ನಡೆಯುತ್ತಿದೆ.ವಾಟ್ಸಾಪ್ ,ಫೇಸ್ಬುಕ್, ಇನ್ ಸ್ಟಾಗ್ರಾಂ ನಲ್ಲಿ ನಡೆಯುವ ಅಹಿತಕರ ಘಟನೆಗಳ ಕೇಸ್ ಗಳು ಹೆಚ್ಚು ವಿದ್ಯಾರ್ಥಿಗಳಲ್ಲೇ ಕಂಡು ಬರುತ್ತಿರುವುದು ವಿಷಾದನೀಯ. ಇಂತಹ ವಂಚನೆಗಳ ಬಗ್ಗೆ ವಿದ್ಯಾರ್ಥಿಗಳು ಜಾಗರೂಕತೆ ವಹಿಸಬೇಕು ಎಂದರು.
ಅಲ್ಲದೆ ಪೋಕ್ಸೋ ಕಾಯಿದೆ, ಮಾದಕದ್ರವ್ಯ, ಮದ್ಯ ವ್ಯಸನ, ಆತ್ಮಹತ್ಯೆಯ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೇಸಿಐ ಕಾರ್ಕಳ ರೂರಲ್ ನ ಅಧ್ಯಕ್ಷ ಜೇಸಿ ಮಂಜುನಾಥ್ ಕೋಟ್ಯಾನ್ , ಪೂರ್ವಾಧ್ಯಕ್ಷ ಜೇಸಿ ವೀಣಾ ರಾಜೇಶ್, ವಲಯ ತರಬೇತುದಾರ ಜೇಸಿ ಮೋಹನ್ ನಕ್ರೆ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ನಾಗರಾಜ್ ಸ್ವಾಗತಿಸಿದರು.ಕಿರಿಯ ತರಬೇತಿ ಅಧಿಕಾರಿ ಸಂತೋಷ್ ವಂದಿಸಿದರು.