ಕಾರ್ಕಳ:ಈ ಬಾರಿಯ ವಿಧಾಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ 81.30 ಮತದಾನವಾಗಿದೆ. ಕೆಲವೆಡೆ ಸಣ್ಣಪುಟ್ಟ ವಾಗ್ವಾದ, ಮತಯಂತ್ರದಲ್ಲಿನ ತಾಂತ್ರಿಕ ದೋಷಗಳು ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡೆದಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 209 ಮತಗಟ್ಟೆಗಳಿದ್ದು 1,90,577 ಮತದಾರರಿದ್ದಾರೆ.ಈ ಪೈಕಿ 99142 ಮಹಿಳಾ ಹಾಗೂ 91435 ಪುರುಷ ಮತದಾರರಿದ್ದು, ಈ ಪೈಕಿ 1,54,938 ಮತಗಳು ಚಲಾವಣೆಯಾಗಿದ್ದು, 81068 ಮಹಿಳೆಯರು ಹಾಗೂ 73870 ಪುರುಷ ಮತದಾರರು ಹಕ್ಕು ಚಲಾಯಿಸಿದ್ದು ಒಟ್ಟಾರೆ 81.30 ಮತದಾನವಾಗಿದೆ.
ಈ ಬಾರಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಅತಿಸೂಕ್ಷö್ಮ ಮತಗಟ್ಟೆಗಳ ಬದಲಿಗೆ 52 ಮತಗಟ್ಟೆಗಳನ್ನು ಸೂಕ್ಷö್ಮ ಮತಗಟ್ಟೆಗಳನ್ನಾಗಿ ವಿಂಗಡಿಸಲಾಗಿತ್ತು.ಭದ್ರತೆಗಾಗಿ ಅರೆಸೇನಾ ಪಡೆಗಳು, ಸಿಆರ್‌ಪಿಎಫ್,ತಮಿಳುನಾಡು ಪೊಲೀಸ್ ಸೇರಿದಂತೆ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು
ಮಿಯ್ಯಾರು ಮತಗಟ್ಟೆಯಲ್ಲಿ ಕೈಕೊಟ್ಟ ಮತಯಂತ್ರ: ಮತದಾನ ವಿಳಂಬ:
ಕಾರ್ಕಳ ವಿಧಾನಸಭಾ ಕ್ಷೇತ್ರದ ಮಿಯ್ಯಾರು ಕುಂಟಿಬೈಲು ಮತಗಟ್ಟೆಯಲ್ಲಿ ಮತದಾನ ಆರಂಭದ ವೇಳೆ ಮತಯಂತ್ರದಲ್ಲಿ ದೋಷ ಕಂಡುಬAದ ಹಿನ್ನಲೆಯಲ್ಲಿ ಸುಮಾರು ಒಂದು ತಾಸು ಮತದಾನ ತಡವಾಗಿದೆ, ಇದರಿಂದ ಕೆಲಸಕ್ಕೆ ಹೋಗಬೇಕಿದ್ದವರು ಮತದಾನ ಮಾಡದೇ ಕಾದುಕಾದು ವಾಪಾಸು ಹೋಗಿರುವ ಘಟನೆಯೂ ನಡೆಯಿತು.
ನಕಲಿ ಮತದಾನದ ಆರೋಪ: ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ:
ಮಿಯ್ಯಾರು ಕುಂಟಿಬೈಲು ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮತದಾನ ವಿಳಂಬವಾಗಿರುವ ನಡುವೆ ಕೊನೆಗೂ ಮತದಾನ ಶಾಂತಿಯುತವಾಗಿ ಮುಕ್ತಾಯವಾಗುತ್ತಿದ್ದಾಗ ಏಕಾಎಕಿ ನಕಲಿ ಮತದಾನವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು. ಮತದಾನ ಮುಗಿದ ತಕ್ಷಣ ನಕಲಿ ಮತದಾನ ಮಾಡಿರುವ ವ್ಯಕ್ತಿಯನ್ನು ಬಂಧಿಸಿ ಕ್ರಮ ಜರುಗಿಸಬೇಕೆಂದು ಕಾರ್ಯಕರ್ತರು ಪೊಲೀಸರಿಗೆ ಪಟ್ಟು ಹಿಡಿದರು. ಇದೇವೇಳೆ ಪೊಲೀಸರ ಹಾಗೂ ಕಾರ್ಯರ್ಕರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ನಡೆಯಿತು