ಕಾರ್ಕಳ: ಅತ್ಯುತ್ತಮ ಸಮಾಜ ಸೇವೆಗೆ ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಛತ್ರಪತಿ ಫೌಂಡೇಶನ್ ಇದರ ಸಂಸ್ಥಾಪಕರು ಹಾಗೂ ಅಧ್ಯಕ್ಷ ಗಿರೀಶ್ ರಾವ್ ಅವರನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ
ಹಿರಿಯಂಗಡಿ ಬೆಂಗಳೂರು ರಮೇಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ರಾವ್ ಅವರ ಅವಧಿಯಲ್ಲಿ ದೇವಳದ ಸರ್ವಾಂಗಿಣ ಅಭಿವೃದ್ಧಿ ಜೊತೆಗೆ ಮರಾಠ ಸಮಾಜದ ಸಾಮಾಜಿಕ ಚಟುವಟಿಕೆಗಳು ಚೇತರಿಸಿಕೊಳ್ಳಲು ಇವರ ನಾಯಕತ್ವ ಸಹಕಾರಿಯಾಗಿದೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು ನಮ್ಮ ದೇವಸ್ಥಾನ ಹಾಗೂ ನಮ್ಮ ಸಮಾಜಕ್ಕೆ ಹೆಮ್ಮೆ ತಂದಿರುವಂತಹ ವಿಚಾರ. ಅವರ ಸಾಮಾಜಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಗಳಿಗೆ ಸಂದ ಪ್ರಶಸ್ತಿ ಅರ್ಥಪೂರ್ಣವಾಗಿದೆ ಎಂದು ರಾಮಚಂದ್ರರಾವ್ ಪುಣೆ ಹೇಳಿದರು.
ಅಭಿನಂದನೆಯನ್ನು ಸ್ವೀಕರಿಸಿದ ಗಿರೀಶ್ ರಾವ್ ರವರು ಈ ಪ್ರಶಸ್ತಿಯಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲು ಪ್ರೇರಣೆ ಆಗಿದೆ. ಹಾಗೂ ಅಭಿನಂದಿಸಿದ ದೇವಲಯದ ಆಡಳಿತ ಮಂಡಳಿ ಹಾಗೂ ಸಮಾಜದ ಪದಾಧಿಕಾರಿಗಳಿಗೆ ಧನ್ಯವಾದವನ್ನು ಸಮರ್ಪಿಸಿದರು
ವೇದಿಕೆಯಲ್ಲಿ ಗಣಪತಿ ಪಂಡಿತ್, ಸುಶೀಲರಾವ್ ಪವಾರ್ ಕೊಪ್ಪ. ಆಶಾ.ಜಿ.ರಾವ್. ಸುಧೀಂದ್ರ ರಾವ್, ದಯಾನಂದ ರಾವ್ ರಾಮಚಂದ್ರ ರಾವ್, ಗಣೇಶ್ ರಾವ್ ಉಪಸ್ಥಿತರಿದ್ದರು.
ಹರೇಂದ್ರ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.