ಕಾರ್ಕಳ: ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆಗೆ ದಿನಾಂಕ ಪ್ರಕಟವಾಗಿದೆ.
ಕಾರ್ಕಳ ತಾಲೂಕಿನ ಒಟ್ಟು 27 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಒಟ್ಟು ಒಟ್ಟು ಆರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಆಗಸ್ಟ್ 16ರಂದು ಮರ್ಣೆ, ನಿಟ್ಟೆ ಬೋಳ, ಕುಕ್ಕುಂದೂರು, ಸಾಣೂರು, ಹಿರ್ಗಾನ, ಮುಡಾರು ಆಗಸ್ಟ್ 17ರಂದು ಕಡ್ತಲ, ಶಿರ್ಲಾಲು, ಎರ್ಲಪಾಡಿ, ಆಗಸ್ಟ್ 18ರಂದು ನೀರೆ, ಕರ್ವಾಶೆ, ನಂದಳಿಕೆ, ಇರ್ವತ್ತೂರು, ನಲ್ಲೂರು, ಕಾಂತಾವರ ಹಾಗೂ ದುರ್ಗಾ ಆಗಸ್ಟ್ 19 ರಂದು ರೆಂಜಾಳ, ಮಾಳ,ಮುಂಡ್ಕೂರು, ಬೈಲೂರು, ಕಲ್ಯಾ, ಮಿಯ್ಯಾರು ಆಗಸ್ಟ್ 21ರಂದು ಪಳ್ಳಿ ಹಾಗೂ ಆಗಸ್ಟ್ 22ರಂದು ಈದು,ಬೆಳ್ಮಣ್, ಇನ್ನಾ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಆಯಾ ಪಂಚಾಯತಿಗಳ ಚುನಾವಣಾ ಪ್ರಕ್ರಿಯೆ ನಿರ್ವಹಿಸಲು ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.