Share this news

ಕಾರ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ ರಿ. ಕಾರ್ಕಳ ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ಕಾರ್ಕಳ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಟಿ ಕಾರ್ಯಕ್ರಮವು ಕಾರ್ಕಳ ಲಕ್ಷ್ಮೀದೇವಿ ಸಭಾ ಭವನದಲ್ಲಿ ಶುಕ್ರವಾರ ನಡೆಯಿತು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ,ಮಾತನಾಡಿ,ಜ್ಞಾನ ವಿಕಾಸ ಕಾರ್ಯಕ್ರಮದಿಂದ ಮಹಿಳೆಯರು ಮುಖ್ಯವಾಹಿನಿಗೆ ಬಂದು,ವ್ಯವಹಾರ, ಸ್ವ ಉದ್ಯೋಗ, ಉನ್ನತ ಹುದ್ದೆಗಳನ್ನು ಅಲಂಕರಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಧ್ಯವಾಗಿದೆ ಎಂದರು.ಇದೇವೇಳೆ
ಹದಿಹರೆಯದ ಮಕ್ಕಳನ್ನು ಸಮಾಜದ ಸಭ್ಯ ನಾಗರಿಕರನ್ನಾಗಿ ಬೆಳೆಸುವಲ್ಲಿ ಮಾತೆಯರ ಪಾತ್ರ ಎನ್ನುವ ವಿಷಯ ಕುರಿತು ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ,ಧರ್ಮ ಜಾಗೃತಿ ಮನೆಯಿಂದಲೇ ಆರಂಭವಾಗಬೇಕೆಂದರು.
ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯೋಜನೆ ಆರಂಭದಲ್ಲಿ ಸಂಘ ಕಟ್ಟಿದ ಪರಿಯನ್ನು ನೆನಪಿಸಿಕೊಂಡರು.
ದೇವಸ್ಥಾನಗಳಿಗೆ ಹೋಗುವಾಗ ಮಕ್ಕಳನ್ನು ಜೊತೆ ಕರೆದುಕೊಂಡು ಹೋಗುವುದು ಕೂಡ ಸಂಸ್ಕಾರ ಕಲಿಸುವ ಒಂದು ವಿಧಾನ ಎಂಬುವುದನ್ನು ಮಹಿಳೆಯರಿಗೆ ತಿಳಿ ಹೇಳಿದರು
ಕಾರ್ಯಕ್ರಮದಲ್ಲಿ ರೇಣುಕಾ ಕಣಿಯೂರು ಆರೋಗ್ಯ ನಿರ್ದೇಶಕರು ಯುವವಾಹಿನಿ ಘಟಕ ಮಾಣಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಜ್ಞಾನ ವಿಕಾಸ ಕೇಂದ್ರ ಅಧ್ಯಕ್ಷೆ ಸುಮತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ವೇದಿಕೆಯಲ್ಲಿ ರಮಿತಾ ರಾವ್, ಆರೋಗ್ಯ ಸಹಾಯಕಿ ಕುಮುದಾ, ರಂಗಕಲಾ ನಿರ್ದೇಶಕರ ಸಂದೀಪ್ ಬಾರಡಿ ರವರು ಸ್ಪರ್ಧೆಗಳ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಪ್ರದರ್ಶನ , ಪೌಷ್ಠಿಕ ಆಹಾರ ಪ್ರದರ್ಶನ ಸ್ಪರ್ಧೆ , ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆ ಏರ್ಪಡಿಸಲಾಗಿತ್ತು
ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಹಾಗೂ ಆಟೋ ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು
ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಕಲಚೇತನರಿಗೆ ಅವಶ್ಯಕ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಹೇಮಲತಾ , ಜ್ಞಾನ ವಿಕಾಸ ಯೋಜನಾಧಿಕಾರಿ ಅಮೃತ , ಜ್ಞಾನ ವಿಕಾಸ ಸಮನ್ವಯಧಿಕಾರಿ ಸವಿತಾ, ಮೇಲ್ವಿಚಾರಕ ಮನೋಜ್ ಹೆಗ್ಡೆ , ಗೀತಾ ಮುಂತಾದವರು ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *