Share this news

ಕಾರ್ಕಳ : ವೇದಮೂಲವಾದ ನಮ್ಮ ಎಲ್ಲಾ ಕಲಾಪ್ರಕಾರಗಳಲ್ಲಿ ನಾಟಕವೂ ಕೂಡಾ ಒಂದಾಗಿದ್ದು ವೇದಗಳಲ್ಲಿ ನಾಟಕದ ಬೀಜರೂಪದ ಅನೇಕ ಘಟನೆಗಳನ್ನು ಮತ್ತು ಕಥೆಗಳನ್ನು ಗಮನಿಸಬಹುದಾಗಿದ್ದು ಸಂಸ್ಕೃತ ನಾಟಕ ಪರಂಪರೆಯಲ್ಲಿರುವ ಕ್ರಾಂತಿಕಾರಕ ಹೆಜ್ಜೆಗಳನ್ನು ಕೂಡಾ ಗುರುತಿಸಬಹುದಾಗಿದೆ ಎಂದು ಖ್ಯಾತ ಸಂಸ್ಕೃತ ವಿದ್ವಾಂಸರು ಹಾಗೂ ಉಪನ್ಯಾಸಕರೂ ಆಗಿರುವ ಜಿ.ಪಿ.ಪ್ರಭಾಕರ್ ತುಮರಿ ಹೇಳಿದರು.

 

ಅವರು ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಕಾರ್ಕಳದ ಹೋಟೆಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ಅರಿವು ತಿಳಿವು ಕಾರ್ಯಕ್ರಮದಲ್ಲಿ ಸಂಸ್ಕೃತ ನಾಟಕಗಳು ಮತ್ತು ಆಧುನಿಕ ರಂಗಭೂಮಿ -ಹೊಸ ಸಾಧ್ಯತೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಭಾಸ, ಕಾಳಿದಾಸ ಮುಂತಾದ ಅನೇಕ ಕವಿಗಳು ರಚಿಸಿದ ಸಂಸ್ಕೃತ ನಾಟಕಗಳು ರಂಗದಲ್ಲಿ ಯಶಸ್ವಿಯಾಗಿದ್ದು ಭಕ್ತಿ ಚಳವಳಿಯ ಕಾಲಘಟ್ಟದಲ್ಲಿಯೂ ಸಂಸ್ಕೃತ ನಾಟಕಗಳು ಮತ್ತು ಕಾವ್ಯ ಪರಂಪರೆ ಬೆಳೆದು ಬಂದವು. ಕನ್ನಡ ಮತ್ತು ಸಂಸ್ಕೃತದ ಉತ್ತಮ ಭಾಂದವ್ಯದಿAದಾಗಿ ಅನೇಕ ಕಂಪೆನಿ ನಾಟಕಗಳಲ್ಲಿಯೂ ಸಂಸ್ಕೃತದಿAದ ಅನುವಾದಿತ ನಾಟಕಗಳು ಕೆಲವು ಮಾರ್ಪಾಡುಗಳೊಂದಿಗೆ ವೃತ್ತಿ ರಂಗಭೂಮಿಯಲ್ಲಿ ಯಶಸ್ವಿಯಾಗಿವೆ ಎಂದರು. ಭರತನ ನಾಟ್ಯ ಶಾಸ್ತçದಲ್ಲಿ ನಾಟಕದ ಬಗ್ಗೆಯು ಉಲ್ಲೇಖವಿದ್ದು ಅದನ್ನವರು ಸೋದಾಹರಣವಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ.ಕಾರ್ಕಳ ತಾಲೂಕಿನ ಗೌರವಾಧ್ಯಕ್ಷರಾದ ನಿತ್ಯಾನಂದ ಪೈ, ಉಪಾಧ್ಯಕ್ಷರಾದ ಕ್ಯಾ. ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೀತಾ ಮಲ್ಯ ಅವರು ಪ್ರಾರ್ಥಿಸಿದರು. ವೀಣಾ ರಾಜೇಶ್ ಉಪನ್ಯಾಸಕರನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವಂದಿಸಿದರು.. ಸತೀಶ್ ಕುಮಾರ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *