Share this news

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ 13 ಕೋಟಿ ರೂ. ವೆಚ್ಚದ ಒಳಚರಂಡಿಯ ಕಾಮಗಾರಿಯು ಕಳಪೆಯಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ, ಈ ಬಗ್ಗೆ ಅನೇಕ ದೂರುಗಳಿದ್ದರೂ ಸಚಿವ ಸುನೀಲ್ ಕುಮಾರ್ ಮೌನವಾಗಿದ್ದಾರೆ. ಇದರಿಂದಾಗಿ ಕಳಪೆಯ ಜೊತೆ ಭೃಷ್ಟಾಚಾರವೂ ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆಯ ಕುರಿತು ಸಚಿವರು ಸ್ಪಷ್ಟಪಡಿಸಲಿ ಎಂದು ಎಂದು ಪುರಸಭಾ ಸದಸ್ಯ, ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ.

ಒಳಚರಂಡಿಯ ಕಳಪೆ ಕಾಮಗಾರಿಯನ್ನು ಮುಚ್ಚಿಹಾಕಲು ಒಳಚರಂಡಿ ಪೈಪಿಗೆ ಹೆಚ್ಚುವರಿ ಪೈಪನ್ನು ಅಳವಡಿಸಿ ಕಲುಷಿತ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಟ್ಟ ಪರಿಣಾಮ ಕಲುಶಿತ ನೀರು ರಥಬೀದಿಯ ಅನೇಕ ಬಾವಿಗಳಿಗೆ ಹರಡಿದೆ. ಇದರಿಂದಾಗಿ ಬಾವಿಯ ನೀರು ಉಪಯೋಗಕ್ಕೆ ಯೋಗ್ಯವಲ್ಲದೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಇಂತಹ ಕಾಮಗಾರಿ ನಡೆಸಿ ಜನತೆಗೆ ದ್ರೋಹ ಎಸಗಿರುವ ಗುತ್ತಿಗೆದಾರ ಮತ್ತು ಸಂಬAಧಿಸಿದ ಅದಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟು ದೊಡ್ಡ ಮೊತ್ತದ ಕಾಮಗಾರಿಯಾದರೂ ಗುತ್ತಿಗೆದಾರ ಒಮ್ಮೆಯೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಆದ್ದರಿಂದ ಕಾಮಗಾರಿ ವಹಿಸಿಕೊಂಡ ಸಂಸ್ಥೆ ಅಸಲಿಯೋ ನಕಲಿಯೋ ಎಂಬ ಸಂಶಯ ಮೂಡುತಿದೆ ಈ ಬಗ್ಗೆ ತನಿಖೆಯಾಗಬೇಕು. ಈ ಹಿಂದೆಯೂ ಇದೇ ರೀತಿ ಸಮಸ್ಯೆಯಾದಾಗ ಜಿಲ್ಲಾದಿಕಾರಿಯವರಿಗೆ, ತಹಶಿಲ್ದಾರರಿಗೆ, ಪರಿಸರ ಮಾಲಿನ್ಯ ಮಂಡಲಿಗೆ ಮತ್ತು ನಗರ ರಾಣೆಗೆ ದೂರು ಸಲ್ಲಿಸಿದ್ದೆ ಅವರೆಲ್ಲರೂ ಯಾವುದೋ ಒತ್ತಡಕ್ಕೆ ಮಣಿದಂತೆ ಹಿಂಬರಹ ನೀಡಿ ನಿರ್ಲಕ್ಷ್ಯಿಸಿದ್ದರ ಫಲವಾಗಿ ಇಂದು ಇಂತಹ ಮೋಸ ನಡೆದಿದೆ. ಪವಿತ್ರ ರಥಬೀದಿಯನ್ನು ಅಪವಿತ್ರ ಮಾಡಿದ ಅಪಕೀರ್ತಿ ಇವರಿಗೆಲ್ಲರಿಗೂ ಸಲ್ಲುತ್ತದೆ. ಈ ಸಮಸ್ಯೆ ಪರಿಹಾರ ಸಿಗುವವರೆಗೂ ನಿರಂತರ ಹೋರಾಟ ನಡೆಯುತ್ತದೆ ಎಂದು ಅವರು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *