ಕಾರ್ಕಳ:ಮಹಿಳೆಯೊಬ್ಬರು ಹೊಸ ಮೊಬೈಲ್ ಖರೀದಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅವರ ಕೈಯಲ್ಲಿದ್ದ ಮೊಬೈಲ್ ಚೀಲ ಹಾಗೂ ಅದರಲ್ಲಿದ್ದ ನಗದನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕಾಬೆಟ್ಟಿನ ಭಾರತ್ ಫೈನಾನ್ಸ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಹಾವೇರಿ ಮೂಲದ ಪಕೀರಮ್ಮ ಎಂಬವರು ಸೋಮವಾರ ರಾತ್ರಿ ತನ್ನ ಸ್ನೇಹಿತೆ ವೀಣಾ ಜತೆಗೆ ಮೊಬೈಲ್ ಶಾಪ್ ಗೆ ತೆರಳಿ 15 ಸಾವಿರ ಮೌಲ್ಯದ ಮೊಬೈಲ್ ಖರೀದಿಸಿ ಮನೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹೊಸ ಮೊಬೈಲ್ ಹಾಗೂ ಹಾಗೂ 5 ಸಾವಿರ ರೂ. ನಗದು ಇದ್ದ ಫಕೀರಮ್ಮ ಅವರ ಹ್ಯಾಂಡ್ ಬ್ಯಾಗ್ ಎಳೆದೊಯ್ದು ಪರಾರಿಯಾಗಿದ್ದಾನೆ
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






