ಕಾರ್ಕಳ: ಮಹಾಲಿಂಗೇಶ್ವರ ಯುವಕ ಮಂಡಲ ಮತ್ತು ಮಹಾಲಿಂಗೇಶ್ವರ ಮಹಿಳಾ ಮಂಡಲ ಪತ್ತೊಂಜಿಕಟ್ಟೆ ಪೆವಾ೯ಜೆ ಕಾಕ೯ಳ ಇದರ ವತಿಯಿಂದ ಸಂಘದ ನಿಕಟ ಪೂರ್ವ ಅಧ್ಯಕ್ಷ ಪ್ರಸಾದ್ ದೇವಾಡಿಗ, ಗುಂಡ್ಯ ಇವರು ಕೊಡುಗೆಯಾಗಿ ನೀಡಿದ ನೋಟ್ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.
ಪತ್ತೊಂಜಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊರಳಕೋಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಸುಹಾಸಿನಿ ಶೆಟ್ಟಿ. ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ಡಿ’ಅಲ್ಮೇಡಾ, ಪ್ರಸಾದ್ ದೇವಾಡಿಗ, ಯುವಕ ಮಂಡಳದ ಗೌರವ ಸಲಹೆಗಾರರಾದ ಗಣೇಶ್ ಎಂ. ಶೆಟ್ಟಿ, ಹೆನ್ರಿ ಸಾಂತ್ ಮಯೋರ್, ಯುವಕ ಮಂಡಲದ ಕಾಯ೯ದಶಿ೯ ಸಂದೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಸನ್ನ ರಾವ್, ಜತೆ ಕಾಯ೯ದಶಿ೯ ರವೀಂದ್ರ ಸಫಲಿಗ, ರಾಜೇಂದ್ರ ಸಫಲಿಗ, ಮಹಿಳಾ ಮಂಡಲದ ಕಾಯ೯ದಶಿ೯ ಆರುಂಧತಿ ಬಿ. ಆಚಾರ್, ಕ್ರೀಡಾ ಕಾಯ೯ದಶಿ೯ ರೂಪ ಹರೀಶ್ ಶೆಟ್ಟಿ, ಮಾಜಿ ಅಧ್ಯಕ್ಷೆ ಅಮ್ರತಾ ಭಾಸ್ಕರ್ ಶೆಟ್ಟಿ ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು