ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಜಲಕ್ಷಾಮ ಮುಂದುವರೆದಿದ್ದು, ಕುಡಿಯುವ ನೀರಿಗೂ ಬರ ಬಂದಿದೆ.ಆದ್ದರಿಂದ ತಕ್ಷಣವೇ ಅಧಿಕಾರಿಗಳು ಜನರಿಗೆ ಕುಡಿಯುವ ನೀರು ಪೂರೈಸಬೇಕೆಂದು ಪುರಸಭಾ ಸದಸ್ಯ ಕಾಂಗ್ರೆಸ್ ವಕ್ತಾರ ಶುಭದ್ ರಾವ್ ಆಗ್ರಹಿಸಿದ್ದಾರೆ.
ಕೋಟ್ಯಾಂತರ ರೂಪಾಯಿ ನೀರಾವರಿ ಯೋಜನೆಗಳು ಹಳ್ಳ ಹಿಡಿದಿರುವುದರಿಂದ ಈಗ ನೀರಿನ ಬರ ಎದುರಾಗಿದೆ ಎಂದು ಶುಭದ ರಾವ್ ಆರೋಪಿಸಿದ್ದಾರೆ.
ಈಗಾಗಲೇ ಮುಂಡ್ಲಿ ಜಲಾಶಯ ಸಂಪೂರ್ಣ ಬತ್ತಿಹೋಗಿದೆ ರಾಮಸಮುದ್ರದಿಂದ ನೀರನ್ನು ಬಳಸಲಾಗುತ್ತಿದ್ದರೂ ಸಮರ್ಪಕವಾಗಿ ವಿತರಿಸಲು ಸಾದ್ಯವಾಗುತ್ತಿಲ್ಲ ಹಾಗಾಗಿ ಮಿತವಾದ ನೀರಿನ ಬಳಕೆ ಮಾಡುವಂತೆ ಪುರಸಭೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈ ನಡುವೆ 136 ಕೋಟಿ ರೂ.ನಲ್ಲಿ ಪೂರ್ಣಗೊಂಡ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಖೋತ ಹೊಡೆದಿದ್ದು ಜನತೆಯ ನಿರೀಕ್ಷೆಯನ್ನುಹುಸಿಯಾಗಿಸಿದೆ ಎಂದು ದೂರಿದ್ದಾರೆ.ಎಣ್ಣೆಹೊಳೆಯ ಏತ ನೀರಾವರಿ ಯೋಜನೆಯಿಂದ ಕಾರ್ಕಳ ಪುರಸಭೆ ವ್ಯಾಪ್ತಿಗೆ ನೀರು ಹಾಯಿಸಲಾಗುವುದು ಎಂಬ ದೊಡ್ಡ ಪ್ರಚಾರವನ್ನು ಗಿಟ್ಟಿಸಲಾಗಿತ್ತು. ಅದಕ್ಕಾಗಿ ಕಾರ್ಕಳ ಪೇಟೆಯ ರಸ್ತೆಯನ್ನು ಪೈಪ್‌ಲೈನ್‌ಗಳನ್ನು ಜೋಡಿಸುವ ಉದ್ದೇಶದಿಂದ ಅಗೆದು ಹಾಕಲಾಗಿತ್ತು ಆದರೆ ಈ ಯೋಜನೆ ಸಂಪೂರ್ಣ ವಿಫಲವಾಗಿದೆ ಕಾರ್ಕಳಕ್ಕೆ ನೀರು ಬರುತ್ತದೆ ಎಂದು ಕಾಯುತ್ತಿದ್ದ ಜನತೆ ಕಾದು ಕಾದು ಬೇಸತ್ತಿದ್ದಾರೆ ಭ್ರಷ್ಟಾಚಾರ ಎಸಗಲು ಜನತೆಯ ತೆರಿಗೆ ಹಣವನ್ನು ಫೋಲು ಮಾಡಲು ಈ ಯೋಜನೆ ಜಾರಿಯಾಗಿದೆಯೇ ಎನ್ನುವುದಕ್ಕೆ ಉತ್ತರಿಸಬೇಕು ಎಂದಿದ್ದಾರೆ.
ಪುರಸಭಾ ವ್ಯಾಪ್ತಿಯ 13 ಕೋಟಿ ರೂ.ಒಳಚರಂಡಿ ಯೋಜನೆ ಕೂಡಾ ಸಂಪೂರ್ಣ ವಿಫಲವಾಗಿದ್ದು ಕುಡಿಯುವ ನೀರಿನ ಬಾವಿಗಳಲ್ಲಿ ಕೊಳಚೆ ನೀರು ಇಂಗಿ ಜನತೆ ತೊಂದರೆ ಅನುಭವಿಸುತ್ತಿದ್ದಾರೆ, ಅದ್ದರಿಂದ ತಕ್ಷಣ ಎಲ್ಲಾ ವಾರ್ಡ್ ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಎಂದು ಶುಭದ್ ರಾವ್ ಆಗ್ರಹಿಸಿದ್ದಾರೆ