ಕಾರ್ಕಳ : ಲೇಖಕಿ ವಸುಧಾ ಶೆಣೈ ಅವರು ತಮ್ಮ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದು ಅವರ “ಭಾವಾಂತರಂಗ” ಕಥಾಸಂಕಲನ ಬಿಡುಗಡೆ ಕಾರ್ಯಕ್ರಮವು ಅವರ ಸ್ವಗೃಹ ಕೃಷ್ಣದಲ್ಲಿ ನಡೆಯಿತು.
ಅವರ ತಾಯಿ ಲಕ್ಷ್ಮಿದೇವಿ ಶೆಣೈ ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಜಗದೀಶ್ ಶೆಣೈ, ಸತ್ಯನಾರಾಯಣ ಶೆಣೈ ಉಪಸ್ಥಿತರಿದ್ದರು.
ಗಂಗಾ ನಾಯಕ್ ಪ್ರಾರ್ಥಿಸಿ, ಆರತಿ ಪೈ ಸ್ವಾಗತಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಲೇಖಕಿ ವಸುಧಾ ಶೆಣೈ ತಮ್ಮ ಪುಸ್ತಕ ಬಿಡುಗಡೆಯಾದ ಸಂಧರ್ಭವನ್ನು ವಿವರಿಸಿ ಅದಕ್ಕೆ ಕಾರಣೀಕರ್ತರಾದ ಅಭಿಮಾನಿ ಓದುಗ ಹರ್ಷ .ಡಿ.ಎನ್ ರವರನ್ನು ಸ್ಮರಿಸಿ ವಂದಿಸಿದರು.