ಕಾರ್ಕಳ : ಕಾರ್ಕಳ ಫೆಡಿಲೈಟ್ ಇಂಡಸ್ಟ್ರೀಸ್ ಫೆವಿಕಾಲ್ ಪ್ರಾಡಕ್ಟ್ಸ್ ಚಾಂಪಿಯನ್ಸ್ ಕ್ಲಬ್ ನ ವತಿಯಿಂದ ಕಾರ್ಕಳ ಚೇತನಾ ವಿಶೇಷ ಶಾಲೆಗೆ ರೂ. 25,000/- ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಫೆಡಿಲೈಟ್ಸ್ ಫೆವಿಕಲ್ ಚಾಂಪಿಯನ್ಸ್ ಕ್ಲಬ್‌ನ ಉಪಾಧ್ಯಕ್ಷರಾದ ಶಾರ್ಯಾರ್, ಫೆಡಿಲೈಟ್ ಇಂಡಸ್ಟ್ರೀಸ್ನ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀಕಾಂತ್ ಭಂಡಾರಿ, ಸೇಲ್ಸ್ ಆಫೀಸರ್ ಮಂಜುನಾಥ್ ಶೇಟ್, ಸಂಸ್ಥೆಯ ಅಧ್ಯಕ್ಷರಾದ ಎಂ. ಗಣಪತಿ ಪೈ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಶಾಲಾ ಸಂಚಾಲಕರಾದ ರಘುನಾಥ್ ಶೆಟ್ಟಿ ಸಂಸ್ಥೆಗೆ ಸಹಕರಿಸಿದ ಫೆಡಿಲೈಟ್ಸ್ ಸಂಸ್ಥೆ ಹಾಗೂ ಚಾಂಪಿಯನ್ಸ್ ಕ್ಲಬ್ ಕಾರ್ಕಳ ಇವರಿಗೆ ಕೃತಜ್ಞತೆ ಸಲ್ಲಿಸಿದರು.