ಕಾರ್ಕಳ : ಕಾರ್ಕಳ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ-2023 ಭಾವಾಂತರAಗ ಕಾರ್ಕಳ ಎಸ್‌ವಿಟಿ ವಿದ್ಯಾಸಂಸ್ಥೆಯ ಅಂಡಾರು ವಿಠಲ ರುಕ್ಮಿಣಿ ಕಿಣಿ ಸಭಾಂಗಣದಲ್ಲಿ ಫೆ.12ರಂದು ಬೆಳಗ್ಗೆ 10 ಗಂಟೆಯಿAದ ನಡೆಯಲಿದೆ ಎಂದು ಕಾರ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದ್ದಾರೆ.
ಅವರು ಪ್ರಕಾಶ್ ಹೊಟೇಲ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 8 ಗಂಟೆಗೆ ರಾಷ್ಟç ಧ್ವಜಾರೋಹಣ, ಪರಿಷತ್ ಧ್ವಜಾರೋಹಣ, 8.30ಕ್ಕೆ ಅನಂತಶಯನದ ಅನಂತಪದ್ಮನಾಭ ದೇವರ ಸನ್ನಿಧಿಯಿಂದ ಸಮ್ಮೇಳನದ ಅಧ್ಯಕ್ಷರನ್ನು ಎದುರುಗೊಂಡು ಗೌರವಪೂರ್ವಕವಾಗಿ ಸ್ವಾಗತ ಹಾಗೂ ಕನ್ನಡ ಮಾತೆ ಶ್ರೀ ಭುವನೇಶ್ವರಿ ದೇವಿಯ ಶೋಭಾಯಾತ್ರೆ ನಡೆಯಲಿದೆ ಎಂದರು.
ಬೆಳಗ್ಗೆ 9 ಗಂಟೆಗೆ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಯು.ಬಿ.ರಾಜಲಕ್ಷಿö್ಮÃ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 11.30 ರಿಂದ 12.30ರ ವರೆಗೆ ಸ್ವರ್ಣ ಕಾರ್ಕಳದ ಹಿರಿಮೆ ಎಂಬ ವಿಚಾರದಡಿ ಸುದ್ದಿಗೋಷ್ಟಿ, 12.45ರಿಂದ 1.45ರ ವರೆಗೆ ಕವಿಗೋಷ್ಟಿ, ಮಧ್ಯಾಹ್ನ 2 ಗಂಟೆಯಿAದ 3.15ರ ವರೆಗೆ ದಿಕ್ಸೂಚಿ ಉಪನ್ಯಾಸ ನಡೆಯಲಿದೆ. ಸಂಜೆ 3.30ರಿಂದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸಮ್ಮೇಳನದಲ್ಲಿ ಸಾಧಕರಾದ ಕೆ.ಕಮಲಾಕ್ಷ ಕಾಮತ್ (ಸಮಾಜ ಸೇವೆ), ಎಸ್.ರಾಮ್ ಭಟ್ (ಸಾಂಸ್ಕೃತಿಕ), ಜ್ಯೋತಿ ಜೆ.ಪೈ (ಸೇವೆ), ಜಗದೀಶ್ ಹೆಗ್ಡೆ (ಶಿಕ್ಷಣ), ಸುಂದರ ಹೆಗ್ಡೆ (ಜನಪದ-ಕಂಬಳ), ಸಂತೋಷ್ ಡಿಸಿಲ್ವ (ಉದ್ಯಮ), ಆಸ್ಮಾ ಬಾನು ಸಾಣೂರು (ಕೃಷಿ), ಡಾ.ಪಲ್ಲವಿ ರಾವ್ (ಉದ್ಯಮ), ಸಿದ್ಧಾಪುರ ವಾಸುದೇವ ಭಟ್ (ಸಾಹಿತ್ಯ-ಪತ್ರಿಕೋದ್ಯಮ), ಯತೀಶ್ ಭಂಡಾರಿ ಸಂಕಲಕರಿಯ (ರಂಗಕಲೆ-ನಾಟಕ), ವೈ.ದಾಮೋದರ ಆಚಾರ್ಯ ಕಾಸರಗೋಳಿ (ಕುಲಕಸುಬು), ಉಗ್ಗಪ್ಪ ಪರವ ಕೆರ್ವಾಶೆ (ದೈವ ನರ್ತಕರು), ಡಾ.ಜನಾರ್ಧನ ನಾಯಕ್ ಅಜೆಕಾರು (ಯಕ್ಷಗಾನ), ಎಂ.ಕೆ.ವಿರAಜಯ ಹೆಗ್ಡೆ (ಸೇವೆ), ರಾಜೇಂದ್ರ ಪ್ರಸಾದ್ ಪೀಚು (ಕ್ರೀಡೆ), ಸಾಣೂರು ಯುವಕ ಮಂಡಲ (ಸಂಘ ಸಂಸ್ಥೆ), ಶ್ರೀ ವೆಂಕಟರಮಣ ಭಜನಾ ಮಂಡಳಿ (ಸಂಘ ಸಂಸ್ಥೆ), ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ (ಸಂಘ ಸಂಸ್ಥೆ) ಅವರನ್ನು ಸನ್ಮಾನಿಸಲಾಗುವುದು.
2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ ಹಾಗೂ 625 ಅಂಕ ಗಳಿಸಿದ ಕಾರ್ಕಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿಶೇಷ ಗೌರವಾರ್ಪಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಮ್ಮೇಳನದ ಗೌರವಾಧ್ಯಕ್ಷ ಕೆ.ಪಿ.ಶೆಣೈ, ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಉಪಾಧ್ಯಕ್ಷ ರಾಮದಾಸ ಪ್ರಭು, ಯೋಗೇಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ದೇವದಾಸ್ ಕೆರೆಮನೆ ಮತ್ತು ಗಣೇಶ್ ಜಾಲ್ಸೂರು ಉಪಸ್ಥಿತರಿದ್ದರು.