ಕಾರ್ಕಳ: ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯ ಕಾಬೆಟ್ಟು ಬೈಪಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ಫೋಟಕಗಳು ತುಂಬಿದ್ದ ಈಚರ್ ಕ್ಯಾಂಟರ್ ಲಾರಿ ಪಲ್ಟಿಯಾಗಿದೆ.
ಅತಿವೇಗವಾಗಿ ಸಾಗುತ್ತಿದ್ದಾಗ ಹಠಾತ್ ವಾಹನವೊಂದು ಅಡ್ಡಬಂದ ಪರಿಣಾಮ ನಿಯಂತ್ರಣ ತಪ್ಪಿದ ಲಾರಿ ಮಾರ್ಗಮಧ್ಯೆ ಪಲ್ಟಿಯಾಗಿದೆ. ವರಂಗದಿಂದ ಮಂಗಳೂರಿಗೆ
ಸ್ಫೋಟಕಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿಯಾಗಿದ್ದು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.






