Share this news

ಕಾರ್ಕಳ : ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಮಾಸಿಕ ಸಭೆಯು ಸಂಘದ ಅಧ್ಯಕ್ಷರಾದ ಗೋವಿಂದರಾಜ್ ಭಟ್ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ಸಂಘದ ಕಾರ್ಯಾಲಯದಲ್ಲಿ ಭಾನುವಾರ ನಡೆಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಉಡುಪ ಜಪ್ತಿ ಅವರು ಮಾತನಾಡಿ, ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರು, ಭಾ.ಕಿ.ಸಂ ಉಡುಪಿ ಜಿಲ್ಲೆ, ತೆಂಗು ಬೆಳೆಗಾರರ ಫೆಡರೇಶನ್ ಉಡುಪಿ ಜಿಲ್ಲೆ ಹಾಗೂ ಕಲ್ಪರಸ ಕಂಪೆನಿ ಸಹಯೋಗದಲ್ಲಿ ಜ.12 ರಂದು ಕುಂದಾಪುರದಲ್ಲಿ ನಡೆಯುವ ರಾಜ್ಯ ತೆಂಗು ಬೆಳೆಗಾರರ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ  ಎಲ್ಲಾ ಇಲಾಖಾಧಿಕಾರಿಗಳು, ವಿಜ್ಞಾನಿಗಳು, ತೋಟಗಾರಿಕಾ ಬೆಳೆಗಳ ಸಂಶೋಧಕರುಗಳು ಭಾಗವಹಿಸಲಿರುವರು.

ಜಿಲ್ಲೆಯ ತೆಂಗು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಭಾಗವಹಿಸಿ ತೆಂಗು ಬೆಳೆಗಾರರು ಅನುಭವಿಸುತ್ತಿರುವ ಕಷ್ಟ-ನಷ್ಟಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಇಲಾಖಾಧಿಕಾರಿಗಳ ಗಮನ ಸೆಳೆಯುವಂತೆ ಹಕ್ಕೊತ್ತಾಯ ಮಾಡಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು. ಅಲ್ಲದೆ ಕಾರ್ಕಳ ತಾಲೂಕಿನಲ್ಲಿರುವ ಎಲ್ಲಾ ತೆಂಗು ಉತ್ಪಾದಕರ ಸೊಸೈಟಿಗಳು ಆದಷ್ಟು ಬೇಗ ತೆಂಗು ಮಂಡಳಿಯೊAದಿಗೆ ನೋಂದಾವಣೆ ನವೀಕರಿಸಿಕೊಂಡಲ್ಲಿ ಈ ವರ್ಷದಲ್ಲಿಯೇ ಅನುದಾನ ಪಡೆಯಲು ಅವಕಾಶ ಇದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷರಾದ ನವೀನ್‌ಚಂದ್ರ ಜೈನ್ ಮಾತನಾಡಿ, ಪ್ರತೀ 3 ವರ್ಷಗಳಿಗೊಮ್ಮೆ ನಡೆಸುತ್ತಾ ಬರುತ್ತಿರುವ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮ್ಮೇಳನವನ್ನು ಈ ಬಾರಿ ಫೆ.11ರಂದು ಉಚ್ಚಿಲ ಶ್ರೀ ಮಹಾಲಕ್ಷಿö್ಮÃ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿಯ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಮತ್ತು ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದ್ದು ತಂಡಗಳಾಗಿ ಸಮ್ಮೇಳನದ ಎಲ್ಲಾ ಜವಾಬ್ದಾರಿಗಳನ್ನು ಹಂಚಿಕೊAಡು ಈ ದಿನದಿಂದಲೇ ಕಾರ್ಯಪ್ರವೃತ್ತರಾಗೋಣ ಎಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಕಾರ್ಕಳ ಹೆಬ್ರಿ ತಾಲೂಕಿನ ಎಲ್ಲಾ ಗ್ರಾಮದ ರೈತರನ್ನು, ಸಂಘ ಸಂಸ್ಥೆಗಳನ್ನು, ಸಹಕಾರ ಸಂಘಗನ್ನು ಮತ್ತು ದಾನಿಗಳನ್ನು ಸಂಪರ್ಕಿಸಿ ಸಮ್ಮೇಳನದ ಮನವಿ ಪತ್ರ ನೀಡಿ ಸಹಕಾರ ಅಪೇಕ್ಷಿಸಲು ವಲಯವಾರು ತಂಡಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು.

ಭಾ.ಕಿ.ಸಂ ಕಾರ್ಕಳ ತಾಲೂಕು ಸಮಿತಿ ಅಧ್ಯಕ್ಷರಾದ ಗೋವಿಂದರಾಜ್ ಭಟ್ ಕಡ್ತಲ ಮಾನಾಡಿ, ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಚಿವರಾದ ಸುನಿಲ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲಾ ರೈತರ ಕುಂದು ಕೊರತೆ ಸಭೆ ಉತ್ತಮ ಪರಿಣಾಮಗಳನ್ನು ಬೀರುತ್ತಿದ್ದು, ಹೆಚ್ಚಿನ ಇಲಾಖಾಧಿಕಾರಿಗಳು ರೈತರ ಪರ ಬಹಳ ಮುತುವರ್ಜಿ ವಹಿಸುತ್ತಿರುವ ಕೆಲವು ಸಂಘಟಣೆಗಳು ಇತ್ತೀಚಿಗೆ ಕಾಣುತ್ತಿದೆ. ಈ ಬೆಳವಣಿಗೆಗೆ ಸಹಕರಿಸಿದ ಸಚಿವರಿಗೆ ಭಾ.ಕಿ.ಸಂ. ಉಡುಪಿ ಜಿಲ್ಲಾ ಸಮಿತಿಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.


ಅರಣ್ಯ, ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯಂತಹ ರೈತರಿಗೆ ಬಹು ಮುಖ್ಯವಾಗುವ ಇಲಾಖೆಗಳಿಂದ ಉತ್ತಮ ಸ್ಪಂದನೆ ದೊರಕುತ್ತಿದ್ದು ತಕ್ಷಣದಲ್ಲಿ ಇಲಾಖಾವಾರು ಸಭೆಗಳನ್ನು ಸಂಘಟಣೆ ಪ್ರತಿನಿಧಿಗಳೊಂದಿಗೆ ನಡೆಸಲು ಉತ್ಸುಕರಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ಭಟ್ ಇರ್ವತ್ತೂರು ಮಾತನಾಡಿದರು.

ಈ ಸಂದರ್ಭದಲ್ಲಿ ಮೋಹನ್‌ದಾಸ ಅಡ್ಯಂತಾಯ, ಕೆ.ಪಿ.ಭಂಡಾರಿ ಕೆದಿಂಜೆ, ಅನಂತ್ ಭಟ್ ಇರ್ವತ್ತೂರು, ಶಿವಪ್ರಸಾದ್ ಭಟ್ ದುರ್ಗಾ, ಹರೀಶ್ ಕಲ್ಯಾ ಮತ್ತು ತಾಲೂಕು ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

 

 

Leave a Reply

Your email address will not be published. Required fields are marked *