Share this news

ಕಾರ್ಕಳ : ಕಾರ್ಕಳ ತಾಲೂಕು ಸಮಿತಿ ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆಯು ಸೋಮವಾರ(ಮೇ.1) ಸಂಘದ ಕಾರ್ಯಲಯದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಗೋವಿಂದರಾಜ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ತಿಂಗಳು ಹವಾಮಾನ ಆಧಾರಿತ ಬೆಳೆವಿಮೆ ಮಾಡಿಸುವ ಕುರಿತು ಜನರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.


ಜಿಲ್ಲಾಧ್ಯಕ್ಷರಾದ ನವೀನ್‌ಚಂದ್ರ ಜೈನ್ ಮಾತನಾಡಿ,ಉಡುಪಿ ಜಿಲ್ಲೆಯಾದ್ಯಂತ ಪ್ರತಿ ಮನೆಗಳಿಗೆ ಗೋಬರ್‌ಗ್ಯಾಸ್ ಕೊಡುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಬೇಕಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಸುಂದರ ಶೆಟ್ಟಿ, ಕೆ.ಪಿ.ಭಂಡಾರಿ, ಉಪೇಂದ್ರ ನಾಯಕ್ ಮರ್ಣೆ, ಕಾರ್ಯದರ್ಶಿ ಶಿವಪ್ರಸಾದ್ ಭಟ್ ಹಾಗೂ ಗ್ರಾಮ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರ್ಶಿ ಶೈಲೇಶ್.ಟಿ. ಮರಾಠೆ ಈದು ಕಾರ್ಯಕ್ರಮ ನಿರೂಪಿಸಿದರು

 

Leave a Reply

Your email address will not be published. Required fields are marked *