Share this news

ಕಾರ್ಕಳ : ಕಾರ್ಕಳ ಭುವನೇಂದ್ರ ಕಾಲೇಜಿನ ಬಿ. ಮಂಜುನಾಥ ಪೈ ಮೆಮೋರಿಯಲ್ ಸ್ನಾತ್ತಕೋತ್ತರ ವಿಭಾಗದಲ್ಲಿ ಫೆಬ್ರವರಿ 6 ಹಾಗೂ 7 ರಂದು NET ಹಾಗೂ KSET ಕುರಿತು ಎರಡು ದಿನಗಳ ಕಾರ್ಯಾಗಾರ ನಡೆಯಿತು.


ಎಂ.ಪಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಶ್ರೀವರ್ಮ ಅಜ್ರಿ ಎಂ. ಕಾರ್ಯಾಗಾರಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿ, NET ಹಾಗೂ KSET ಪರೀಕ್ಷೆಯ ಅವಶ್ಯಕತೆಯನ್ನು ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ|| ಮಂಜುನಾಥ ಎ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.


ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ಕಾರ್ಯಕ್ರಮ ಸಂಯೋಜಕರಾದ ಗುರುಪ್ರಸಾದ್ ಹಾಗೂ ವಿದ್ಯಾರ್ಥಿ ಸಂಯೋಜಕಿ ಕು. ಅನುಷ ಎಂ. ಉಪಸ್ಥಿತರಿದ್ದರು.
ಪದ್ಮಪ್ರಸಾದ್ ಜೈನ್ ಸ್ವಾಗತಿ, ಆಕಾಶ್ ಎಸ್ ಪಿ ವಂದಿಸಿದರು.ವಿದ್ಯಾರ್ಥಿಗಳಾದ ರೆನಿಟಾ ಗಾಮ ನಿರೂಪಿಸಿದರು.


ಕಾರ್ಯಾಗಾರದಲ್ಲಿ ಒಟ್ಟು 60 ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ  ರಾಮಚಂದ್ರ ಭಟ್,  ಗಿರೀಶ ಕೆ,  ಶ್ರೀಹರಿಕಾರಂತ್,  ಅಬ್ದುಲ್ ರಜಾಕ್,  ಪ್ರದೀಪ್ ಶೆಟ್ಟಿ,  ಮನೋಹರ್ ಉಪ್ಪುಂದ ಇವರುಗಳು  ತರಬೇತಿಯನ್ನು ನೀಡಿದರು.

 

Leave a Reply

Your email address will not be published. Required fields are marked *