Share this news

ಕಾರ್ಕಳ: ಮಕ್ಕಳಿಗೆ ಶಾಲೆಯಲ್ಲಿ ನೀಡಿರುವ ಹೋಮ್ ವರ್ಕ್ ಮಾಡಿಸುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಶುರುವಾದ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ವಿನಂತಿ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ನೀಡಿದ ಮನೆಕೆಲಸವನ್ನು ಮಾಡುವಂತೆ ಗಂಡ ಅಶೋಕ ಪೂಜಾರಿಯವರಲ್ಲಿ ಹೇಳಿದಾಗ ಅಶೋಕ್ ಪೂಜಾರಿಯವರು ಪತ್ನಿ ವಿನಂತಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕಾರ್ಕಳ ಗಾಂಧಿ ಮೈದಾನದಲ್ಲಿರುವ ತಮ್ಮ ಫ್ಲ್ಯಾಟಿನ ಕೀಯನ್ನು ಕೊಡುವಂತೆ ಕೇಳಿದಾಗ ಬೆಳಗ್ಗೆ ಹೋಗುವಂತೆ ಪತ್ನಿ ವಿನಂತಿ ತಿಳಿಸಿದಾಗ ಕೋಪಗೊಂಡ ಅಶೋಕ ಪೂಜಾರಿ ಪತ್ನಿ ಮೇಲೆ ಹಲ್ಲೆ ನಡೆಸಿದಾಗ ಆಕೆ ಕಿರುಚಿಕೊಂಡಾಗ ನೀರಿನ ಪ್ಲಾಸ್ಟಿಕ್ ಬಾಟಲಿಯಿಂದ ಮುಖಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ವಿನಂತಿಯವರು ಗಂಡನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ

 

Leave a Reply

Your email address will not be published. Required fields are marked *