ಕಾರ್ಕಳ: ಮೀನು ಹಿಡಿಯಲು ಕೆಲ ದುಷ್ಕರ್ಮಿಗಳು ಹೊಳೆಯ ನೀರಿಗೆ ವಿಷಪ್ರಾಶನ ಮಾಡಿರುವ ಪರಿಣಾಮ ಮೀನುಗಳು ಸೇರಿದಂತೆ ಅಸಂಖ್ಯಾತ ಜಲಚರಗಳ ಮಾರಣಹೋಮವಾಗಿದೆ.
ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಮಲೆಬೆಟ್ಟು ಎಂಬಲ್ಲಿನ ಸ್ವರ್ಣಾ ನದಿಯ ಬಾಂಕ ಗುಂಡಿ ಎಂಬಲ್ಲಿ ಭಾನುವಾರ ದುಷ್ಕರ್ಮಿಗಳು ಗೇರುಬೀಜ ಎಣ್ಣೆ ಅಥವಾ ಕೀಟನಾಶಕವನ್ನು ಹಾಕಿ ಮೀನು ಹಿಡಿಯಲು ಮುಂದಾಗಿದ್ದಾರೆ.
ಈ ಬಾರಿಯ ಬಿರುಬೇಸಗೆಗೆ ತೀವ್ರ ಜಲಕ್ಷಾಮ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಸ್ಥಳೀಯರು ಇದೇ ಹೊಳೆಯ ನೀರನ್ನು ಕುಡಿಯಲು ಬಳಸುತ್ತಿದ್ದರು.ಆದರೆ ದುಷ್ಕರ್ಮಿಗಳು ನೀರಿಗೆ ವಿಷಪ್ರಾಶನ ಮಾಡಿರುವ ಕಾರಣದಿಂದ ಸ್ಥಳೀಯರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇಂತಹ ಕೃತ್ಯ ಎಸಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ