ಕಾರ್ಕಳ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶನದಂತೆ 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಾರ್ಕಳ ತಾಲೂಕಿನ ಈದು ಗ್ರಾಮದ ವಿಶ್ರಾಂತ ಹಿರಿಯ ಪತ್ರಕರ್ತರಾದ ಪದ್ಮಾಕರ ಭಟ್ ಈದು ಇವರನ್ನು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗೌರವಿಸಲಾಯಿತು.
ಕಾರ್ಕಳದ ವಿಜಯ ಕರ್ನಾಟಕ ಪತ್ರಿಕಾ ವರದಿಗಾರರ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮ ಬಂಧು ಆದಿರಾಜ್ ಆಜ್ರಿ ಸಾಂತ್ರಬೆಟ್ಟು ಇವರು ಪದ್ಮಾಕರ ಭಟ್‌ರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್, ಪ್ರಧಾನ ಕಾರ್ಯದರ್ಶಿ ಹರೀಶ್ ಆಚಾರ್ಯ, ಕೋಶಾಧಿಕಾರಿ ಕೆ.ಎಂ. ಖಲೀಲ್, ವಿಲಾಸ್ ಕುಮಾರ್ ನಿಟ್ಟೆ,
ದಿವಾಕರ ದುರ್ಗ ಉಪಸ್ಥಿತರಿದ್ದರು.