ಕಾರ್ಕಳ: ಕಥೊಲಿಕ್ ಸಭಾ ಅಧ್ಯಕ್ಷೆ ಒಲಿವಿಯಾ ಡಿ’ಮೆಲ್ಲೊ ಮುಂದಾಳತ್ವದಲ್ಲಿ ಕಾರ್ಕಳ ಟೌನ್ ಚರ್ಚ್ ಸಭಾ ಭವನದಲ್ಲಿ ವೈದ್ಯಕೀಯ ಪದವಿ ಪಡೆದುಕೊಂಡ ಮೂವರಿಗೆ ಸಹಾಯಕ ಗುರುಗಳಾದ ಫಾದರ್ ಜಿತೇಶ್ ಡಿ’ಸೋಜಾ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಚರ್ಚ್ ಮಂಡಳಿ ಉಪಾಧ್ಯಕ್ಷ ನೇವಿಲ್ ಡಿ’ಸಿಲ್ವ, ಕಾರ್ಯದರ್ಶಿ ವಿನಿತಾ ಡಿ’ಮೆಲ್ಲೊ, ಕ.ಸ.ಕೇಂದ್ರಿಯ ಸಮಿತಿ ಉಪಾಧ್ಯಕ್ಷ ಮಾನ್ಯ ಸೊಲಮನ್ ಆಲ್ವಾರಿಸ್, 20 ಆಯೋಗದ ಸಂಯೋಜಕ ಆಂಟನಿ ಆರಾನ್ಹ, ಕ.ಸ.ಕಾರ್ಯದರ್ಶಿ ಜ್ಯೊತಿ ಡಿ’ಮೆಲ್ಲೊ, ಖಜಾಂಚಿ ರೋಶನ್ ಡಿ’ಮೆಲ್ಲೊ, ಸಮಾಜ ಸೇವಕ ಹೆನ್ರಿ ಸಾಂತ್ ಮಯೋರ್ ಉಪಸ್ಥಿತರಿದ್ದರು.
ಎಲ್ಸಿ ಡಿ’ಸೋಜ ವಂದಿಸಿದರು.