ಕಾರ್ಕಳ : ಕಾರ್ಕಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯ ಜತೆಗೆ, ಜನತೆಯ ಬದುಕನ್ನು ರೂಪಿಸುವಲ್ಲಿ ಸಹಕಾರಿಯಾಗುವಂತಹ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲ್ ತಿಳಿಸಿದ್ದಾರೆ.
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ, ಸರಕಾರಿ ಮೆಡಿಕಲ್ ಕಾಲೇಜು, ಪ್ಯಾರಾಮೆಡಿಕಲ್, ನರ್ಸಿಂಗ್ ತರಬೇತಿ ಕಾಲೇಜು ನಿರ್ಮಾಣ, ಉದ್ಯೋಗಕ್ಕಾಗಿ ಐಟಿ ಪಾರ್ಕ್, ಉನ್ನತ ಶಿಕ್ಷಣ ಅಧ್ಯುನ ಮಾಡುವ ಮಹಿಳೆಯರಿಗೆ ವಸತಿ ನಿಲಯ ಸೌಲಭ್ಯ, ನಗರ ವಲಸೆ ಕಾರ್ಮಿಕರಿಗಾಗಿ ವಸತಿ ಮತ್ತು ಶೌಚಾಲಯ ವ್ಯವಸ್ಥೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸ ವ್ಯವಸ್ಥೆ ಕಲ್ಪಿಸುವ ಯೋಜನೆ ಹೊಂದಿದ್ದೇನೆ ಎಂದಿದ್ದಾರೆ.

ಕಾರ್ಕಳದಲ್ಲಿ ತುಳು ಅಧ್ಯಯನ ಪೀಠ ಸ್ಥಾಪನೆ, ಜಾನಪದ ಹಾಗೂ ಎಲ್ಲಾ ವರ್ಗದ ಕುಶಲ ಕರ್ಮಿಗಳಿಗೆ ಮಾಶಾಸನಕ್ಕಾಗಿ ಒತ್ತಾಯ, ಮೂರ್ತೆದಾರರ ಬೇಡಿಕೆ ಹಾಗೀ ಸಮಸ್ಯೆಗಳ ಪರಿಹಾರ, ಪ್ರವಾಸೋದ್ಯಮಕ್ಕೆ ಒತ್ತು, ನೂತನ ಸುಸಜ್ಜುತ ಪ್ರವಾಸಿ ಮಂದಿರ ನಿರ್ಮಾಣ, ಕಸ್ತೂರಿರಂಗನ್ ವರದಿ ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಶೀಘ್ರ ವಿಲೇವಾರಿ, ಅಕ್ರಮ-ಸಕ್ರಮ, ಭೂ-ನ್ಯಾಯ ಮಂಡಳಿ, ಆಶ್ರಯ ಯೋಜನೆ, ಆರಾಧನೆ, ಧಾರ್ಮಿಕ ಪರಿಷತ್ ಹಾಗೂ ಇತರ ಎಲ್ಲಾ ಸಮಿತಿಗಳ ಸೂಕ್ತ ಜನಪರ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ನಡೆಸುವುದಾಗಿ ತಿಳಿಸಿದ್ದಾರೆ. ಹೀಗೆ ಕಾರ್ಕಳದ ಅಭಿವೃದ್ದಿಗೆ ಪೂರಕವಾದ ನೂರಾರು ಯೋಜನೆಗಳು ನನ್ನ ಕಣ್ಣಮುಂದಿದ್ದು, ಮತದಾರರು ನನ್ನನ್ನು ಬೆಂಬಲಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

